ಕರ್ನಾಟಕ

karnataka

ETV Bharat / state

ಮತ್ತೆ ಲಾಕ್​ಡೌನ್ ಆಗುವ ಆತಂಕ.. ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು! - ಲಾಕ್​ಡೌನ್ ಭೀತಿ

ನಾಳೆಯಿಂದ ಲಾಕ್​ಡೌನ್​ ಆಗುತ್ತೆ ಅನ್ನೋ ಆತಂಕದಲ್ಲಿದ್ದ ಜನ ಒಂದು ವಾರಕ್ಕೆ ಬೇಕಾಗುವ ಅಗತ್ಯ ವಸ್ತುಗಳ ದಾಸ್ತಾನಿಗಾಗಿ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ. ಇಂದು ಬೆಳಗ್ಗೆಯಿಂದಲೂ ಬಿರುಸಿನಿಂದ ವ್ಯಾಪಾರ, ವಹಿವಾಟು ನಡೆಯುತ್ತಿದೆ..

Mysore
ಮೈಸೂರು

By

Published : Jul 13, 2020, 4:44 PM IST

ಮೈಸೂರು :ಮೈಸೂರಿನಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮತ್ತೆ ಲಾಕ್​ಡೌನ್ ಘೋಷಣೆ ಮಾಡಿದ್ರೆ ಏನು ಕಥೆಯೆಂದು ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದರು.

ಅಂಗಡಿಗಳತ್ತ ದೌಡಾಯಿಸಿದ ಜನ

ನಗರದ ವಾಣಿಜ್ಯ ವಹಿವಾಟು ರಸ್ತೆಗಳಾದ ಸಂತೆಪೇಟೆ, ಶಿವರಾಮ್ ಪೇಟೆ, ದೇವರಾಜ ಅರಸು ರಸ್ತೆ, ದೇವರಾಜ ಮಾರ್ಕೇಟ್​ನಲ್ಲಿ ಜನ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಪರಿಣಾಮ, ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು ಪರದಾಡಿದ್ರೆ, ಸಾರ್ವಜನಿಕರು ವಸ್ತುಗಳ ಖರೀದಿಯಲ್ಲಿ ಮಗ್ನರಾಗಿದ್ದರು.

ನಾಳೆಯಿಂದ ಲಾಕ್​ಡೌನ್​ ಆಗುತ್ತೆ ಅನ್ನೋ ಆತಂಕದಲ್ಲಿದ್ದ ಜನ ಒಂದು ವಾರಕ್ಕೆ ಬೇಕಾಗುವ ಅಗತ್ಯ ವಸ್ತುಗಳ ದಾಸ್ತಾನಿಗಾಗಿ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ. ಇಂದು ಬೆಳಗ್ಗೆಯಿಂದಲೂ ಬಿರುಸಿನಿಂದ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಎಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿ, ಹೆಗಲಮೇಲೆ ಮೂಟೆಗಟ್ಟಲೆ ಸಾಮಗ್ರಿಗಳನ್ನು ಸಾರ್ವಜನಿಕರು ಕೊಂಡೊಯ್ದರು. ಲಾಕ್​ಡೌನ್​ ಕುರಿತು ಇಂದು ಸಿಎಂ ಜೊತೆ ಜಿಲ್ಲಾಧಿಕಾರಿ ಸಭೆ ನಡೆಸಿದ್ದು, ಸಂಜೆಯೊಳಗೆ ಲಾಕ್​ಡೌನ್‌ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ABOUT THE AUTHOR

...view details