ಕರ್ನಾಟಕ

karnataka

ETV Bharat / state

ಹಕ್ಕು ಪತ್ರಕ್ಕಾಗಿ ಹೋರಾಟ.. ಮೈಸೂರು ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಿದ ಪ್ರತಿಭಟನಾಕಾರರು - ಈಟಿವಿ ಭಾರತ ಕನ್ನಡ

ರಾಜ್ಯೋತ್ಸವ ಮೆರವಣಿಗೆ ಉದ್ಘಾಟನೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್​ಗೆ ಕಳೆದ 50 ದಿನಗಳಿಂದ ಹಕ್ಕು ಪತ್ರಕ್ಕಾಗಿ ಹೋರಾಟ ಮಾಡುತ್ತಿದ್ದ ಏಕಲವ್ಯ ನಗರದ ಜನರು ಘೇರಾವ್ ಹಾಕಿದರು.

Etv Bharat
ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಿದ ಪ್ರತಿಭಟನಾಕಾರರು

By

Published : Nov 1, 2022, 1:14 PM IST

ಮೈಸೂರು: ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಆಗಮಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್​ಗೆ ಕೋಟೆ ಆಂಜನೇಯ ಆವರಣದ ಬಳಿ ಏಕಲವ್ಯ ನಗರದ ಜನರು ಘೇರಾವ್ ಹಾಕಿದ ಘಟನೆ ನಡೆದಿದೆ.

ಕಳೆದ 50 ದಿನಗಳಿಂದ ತಮ್ಮ ಮನೆಗಳಿಗೆ ಹಕ್ಕು ಪತ್ರ ನೀಡುವಂತೆ ಜಿಲ್ಲಾಧಿಕಾರಿ ಕಚೇರಿಯ ಎದುರು ಸಂಸಾರ ಸಮೇತ ಪ್ರತಿಭಟನೆ ನಡೆಸುತ್ತಿದ್ದ ಏಕಲವ್ಯ ನಗರದ ನಿವಾಸಿಗಳು ಇಂದು ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಭಾಗವಹಿಸಲು ಅಗಮಿಸಿದ್ದ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಭುವನೇಶ್ವರಿ ದೇವಾಲಯಕ್ಕೆ ಪೂಜೆ ಸಲ್ಲಿಸಿ, ನಂತರ ಕೋಟೆ ಆಂಜನೇಯ ದೇವಾಲಯದ ಮುಂಭಾಗ ರಾಜ್ಯೋತ್ಸವ ಮೆರವಣಿಗೆ ಉದ್ಘಾಟನೆಗೆ ಆಗಮಿಸಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಏಕಲವ್ಯ ನಗರದ ಪ್ರತಿಭಟನಾನಿರತ ಜನರು ಸಚಿವರಿಗೆ ಘೇರಾವ್ ಹಾಕಿದರು.

ತಕ್ಷಣ ಉಸ್ತುವಾರಿ ಸಚಿವರನ್ನು ಪೊಲೀಸರು ಸುತ್ತುವರಿದು ಪ್ರತಿಭಟನಾಕಾರರನ್ನು ತಡೆದರು. ಆ ಸಂದರ್ಭದಲ್ಲಿ ಪ್ರತಿಭಟನಾಕಾರರು ಸಚಿವರಿಗೆ ಧಿಕ್ಕಾರ ಕೂಗಿ ಮುನ್ನುಗ್ಗಲು ಯತ್ನಿಸಿದಾಗ ಪ್ರತಿಭಟನಾ ನಿರತರನ್ನು ಪೊಲೀಸರು ತಡೆದು ಅವರನ್ನು ಬಂಧಿಸಿ ಕರೆದೊಯ್ದರು.

ಪ್ರತಿಭಟನೆ ನಡೆಸುತ್ತಿರುವುದು ನನಗೆ ಗೊತ್ತಿಲ್ಲ:ಕಳೆದ 50 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ತಮ್ಮ ಮನೆಗಳಿಗೆ ಹಕ್ಕುಪತ್ರ ನೀಡುವಂತೆ ಪ್ರತಿಭಟನೆ ನಡೆಸುತ್ತಿರುವ ಏಕಲವ್ಯ ನಗರದ ನಿವಾಸಿಗಳ ಬಗ್ಗೆ ನನಗೆ ಗೊತ್ತಿಲ್ಲ. ಅವರು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿಲ್ಲ. ಇದೀಗ ನೂತನ ಜಿಲ್ಲಾಧಿಕಾರಿಗಳು ಬಂದಿದ್ದಾರೆ. ಅವರು ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದು ಅರಮನೆ ಆಡಳಿತ ಮಂಡಳಿಯ ಮಾಧ್ಯಮಗೋಷ್ಟಿಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಇದನ್ನೂ ಓದಿ :ಬೆಳಗಾವಿಯಲ್ಲಿ ‌ಕನ್ನಡ ರಾಜ್ಯೋತ್ಸವ ಸಂಭ್ರಮ.. 10ಸಾವಿರ ಅಡಿ ಕನ್ನಡ ಬಾವುಟದ ಮೆರವಣಿಗೆ

ABOUT THE AUTHOR

...view details