ಮೈಸೂರು:ಜ್ಯುಬಿಲಿಯಂಟ್ ಕಂಪನಿಯ ನೌಕರರನ್ನು ನಂಜನಗೂಡಿನ ಕೆ.ಎಚ್.ಬಿ ಕಾಲೋನಿಯಲ್ಲಿರುವ ಬಿಸಿಎಂ ಹಾಸ್ಟೆಲ್ನಲ್ಲಿ ಕ್ವಾರಂಟೈನ್ನಲ್ಲಿ ಇಡಲಾಗುವುದು ಎಂಬ ಮಾಹಿತಿ ತಿಳಿದು ಅಕ್ಕಪಕ್ಕದ ನಿವಾಸಿಗಳು ಅದನ್ನು ವಿರೋಧಿಸಿ ಹಾಸ್ಟೆಲ್ ಮುಂಭಾಗ ಪ್ರತಿಭಟನೆ ನಡೆಸಿದರು.
ಜ್ಯುಬಿಲಿಯಂಟ್ ಕಂಪನಿಯ ನೌಕರರು ಬಿಸಿಎಂ ಹಾಸ್ಟೆಲ್ನಲ್ಲಿ ಕ್ವಾರಂಟೈನ್: ಸ್ಥಳೀಯರಿಂದ ಪ್ರತಿಭಟನೆ - ಜ್ಯುಬಿಲಿಯಂಟ್ ಕಂಪನಿಯ ನೌಕರರು ಬಿಸಿಎಂ ಹಾಸ್ಟೆಲ್ನಲ್ಲಿ ಕ್ವಾರಂಟೈನ್
ನಂಜನಗೂಡಿನ ಕೆ.ಎಚ್.ಬಿ ಕಾಲೋನಿಯಲ್ಲಿರುವ ಬಿಸಿಎಂ ಹಾಸ್ಟೆಲ್ನಲ್ಲಿ, ಜ್ಯುಬಿಲಿಯಂಟ್ ಕಂಪನಿಯ ನೌಕರರನ್ನು ಕ್ವಾರಂಟೈನ್ನಲ್ಲಿ ಇಡಲಾಗುವುದು ಎಂದು ತಿಳಿದ ಅಲ್ಲಿನ ಸ್ಥಳಿಯ ನಿವಾಸಿಗಳು ಪ್ರತಿಭಟನೆ ನಡೆಸಿದರು.
![ಜ್ಯುಬಿಲಿಯಂಟ್ ಕಂಪನಿಯ ನೌಕರರು ಬಿಸಿಎಂ ಹಾಸ್ಟೆಲ್ನಲ್ಲಿ ಕ್ವಾರಂಟೈನ್: ಸ್ಥಳೀಯರಿಂದ ಪ್ರತಿಭಟನೆ mys](https://etvbharatimages.akamaized.net/etvbharat/prod-images/768-512-6603132-818-6603132-1585625443539.jpg)
mys
ಈಗಾಗಲೇ ಓರ್ವನಿಂದ ಒಂಭತ್ತು ಜನಕ್ಕೆ ಕೊರೊನಾ ಸೋಂಕು ಹರಡಿರುವುದರಿಂದ ಮತ್ತೆ ಬೇರೆಯವರಿಗೂ ಹರಡಿದೆ. ಆದ್ದರಿಂದ ಬಿಸಿಎಂ ಹಾಸ್ಟೆಲ್ನಲ್ಲಿ ನೌಕರರಿಗೆ ಹೋಂ ಕ್ವಾರೆಂಟೈನ್ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರುಗಳಾದ ಎಸ್.ಪಿ.ಮಹೇಶ್, ಎನ್.ಎಸ್.ಯೋಗೀಶ್, ಪ್ರಾಂಶುಪಾಲ ಮಹದೇವಯ್ಯ, ರಿಟೈರ್ಡ್ ಎಎಸ್ಐಗಳಾದ ರಂಗಸ್ವಾಮಿ, ಗೋವಿಂದರಾಜ್, ಶಿವನಂಜಯ್ಯ ಪಾಲ್ಗೊಂಡಿದ್ದರು.