ಮೈಸೂರು :ನಗರದ ಪ್ರಾಥಮಿಕ ಕೇಂದ್ರಗಳಲ್ಲಿ 'ನೋ ಲಸಿಕೆ' ಎಂದು ಬೋರ್ಡ್ ಹಾಕಿಕೊಂಡು, ಅವರಿಗೆ ಬೇಕಾದವರಿಗೆ ಲಸಿಕೆ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಲಸಿಕೆ ಇದ್ದರೂ No vaccine ಬೋರ್ಡ್ : ಕ್ಯೂ ನಿಂತ ಜನರ ಆಕ್ರೋಶ - mysore news
ಬೆಳಗ್ಗೆಯಿಂದ ಕ್ಯೂನಲ್ಲಿ ನಿಂತರೂ ಲಸಿಕೆ ಸಿಗುತ್ತಿಲ್ಲ ಎಂದು ಲಸಿಕೆಯನ್ನು ಪಡೆಯಲು ಬಂದಿದ್ದ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ..
![ಲಸಿಕೆ ಇದ್ದರೂ No vaccine ಬೋರ್ಡ್ : ಕ್ಯೂ ನಿಂತ ಜನರ ಆಕ್ರೋಶ people](https://etvbharatimages.akamaized.net/etvbharat/prod-images/768-512-12413623-thumbnail-3x2-mysore.jpg)
ಜನರ ಆಕ್ರೋಶ
ಇಂದು ನಗರದ ಜೆ ಪಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆಯಲು ಜನ ಮುಂಜಾನೆಯಿಂದಲೇ ಸಾಲಲ್ಲಿ ನಿಂತಿದ್ದಾರೆ. ಆದರೆ, ಆಸ್ಪತ್ರೆ ಸಿಬ್ಬಂದಿ ಲಸಿಕೆ ಇಲ್ಲ ಎಂಬ ಬೋರ್ಡ್ ಹಾಕಿದ್ದಾರೆ.
ಜನರ ಆಕ್ರೋಶ
ಹೊರಗೆ ಲಸಿಕೆ ಇಲ್ಲ ಎಂದು ಬೋರ್ಡ್ ಹಾಕಿ ಅವರಿಗೆ ಬೇಕಾದವರಿಗೆ ಲಸಿಕೆ ನೀಡುತ್ತಿರುವುದನ್ನು ಗಮನಿಸಿದ ಜನ್ರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಳಗ್ಗೆಯಿಂದ ಕ್ಯೂನಲ್ಲಿ ನಿಂತರೂ ಲಸಿಕೆ ಸಿಗುತ್ತಿಲ್ಲ ಎಂದು ಲಸಿಕೆಯನ್ನು ಪಡೆಯಲು ಬಂದಿದ್ದ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.