ಕರ್ನಾಟಕ

karnataka

ETV Bharat / state

'ನಮ್ಮ ಏರಿಯಾದಲ್ಲಿರುವ ಲಾಡ್ಜ್‌ನಲ್ಲಿ ಕ್ವಾರಂಟೈನ್ ಮಾಡಬೇಡಿ' - covid 19

Don't Quarantine at the Lodge in Our Area: protest from localites
ಸ್ಥಳೀಯರ ಪ್ರತಿಭಟನೆ

By

Published : May 12, 2020, 10:57 AM IST

ಮೈಸೂರು: ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ, ಕೆಲವರನ್ನು ಲಾಡ್ಜ್​ಗಳಲ್ಲಿ ಕ್ವಾರಂಟೈನ್ ಮಾಡಿದೆ. ಈ ವಿಚಾರ ತಿಳಿದ ಸ್ಥಳೀಯ ಜನರು, ನಮ್ಮ ಪ್ರದೇಶದ ಲಾಡ್ಜ್‌ನಲ್ಲಿ ಕ್ವಾರಂಟೈನ್ ಮಾಡುವುದು ಬೇಡ ಎಂದು ಪ್ರತಿಭಟಿಸಿರುವ ಘಟನೆ ನಗರದ ಮಂಡಿ ಮೊಹಲ್ಲಾದಲ್ಲಿ ನಡೆದಿದೆ.

ನಗರದ ಹೃದಯ ಭಾಗದಲ್ಲಿರುವ ಮಂಡಿ ಮೊಹಲ್ಲಾದಲ್ಲಿ ಜನಸಂದಣಿ ಹೆಚ್ಚಾಗಿದೆ. ಇಲ್ಲಿ ನಾಲ್ಕೈದು ಲಾಡ್ಜ್‌ಗಳು ಮತ್ತು ಹೋಟೆಲ್​ಗಳಿವೆ. ಜಿಲ್ಲಾಡಳಿತವು ಹೊರಗಡೆಯಿಂದ ಬಂದ ಕೆಲವು ಜನರನ್ನು ಕೋವಿಡ್ ಆಸ್ಪತ್ರೆಗಳು ಮತ್ತು ನಗರದಲ್ಲಿರುವ ಕೆಲವು ಲಾಡ್ಜ್​ಗಳಲ್ಲಿ ಕ್ವಾರಂಟೈನ್ ಮಾಡಿದೆ. ಇದು ಇಲ್ಲಿನ ನಿವಾಸಿಗಳ ನಿದ್ದೆ ಕೆಡಿಸಿದೆ.

ನಮ್ಮ ಏರಿಯಾದಲ್ಲಿ ಜನಸಂದಣಿ ಹೆಚ್ಚಾಗಿದೆ. ಮಕ್ಕಳು, ವೃದ್ಧರು ಇಲ್ಲಿದ್ದಾರೆ. ನೀವು ಇಲ್ಲಿ ಕ್ವಾರಂಟೈನ್ ಮಾಡಿದರೆ ನಮ್ಮ ಅಕ್ಕಪಕ್ಕದವರಿಗೂ ಖಾಯಿಲೆ ಹರಡುತ್ತದೆ ಎಂದು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರೊಂದಿಗೆ ಮಾತನಾಡಿ, ಲಾಡ್ಜ್​ನಲ್ಲಿ ಯಾರನ್ನೂ ಕ್ವಾರಂಟೈನ್ ಮಾಡುವುದಿಲ್ಲ. ಈಗಾಗಲೇ ಲಾಡ್ಜ್ ನಲ್ಲಿದ್ದ ವ್ಯಕ್ತಿಗೆ ಬೇರೆಡೆ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು. ನಂತರ ಜನರು ನಿಟ್ಟುಸಿರುವ ಬಿಟ್ಟು ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು.

ABOUT THE AUTHOR

...view details