ಮೈಸೂರು: ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕುವ ಜನರು ಕೋವಿಡ್ ಭಯದಿಂದ ಪರಿಹಾರ ಕೇಂದ್ರಗಳಿಗೆ ಬರುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹೇಳಿದರು.
ಮೈಸೂರು: ನೆರೆ ಸಂಕಷ್ಟ, ಕೊರೊನಾ ಭಯ.. ಪರಿಹಾರ ಕೇಂದ್ರಗಳಿಗೆ ಬಾರದ ಜನ
ನಂಜನಗೂಡಿನ ತಗ್ಗು ಪ್ರದೇಶಗಳಾದ ಹಳ್ಳದಕೇರಿ, ತೋಪಿನ ಬೀದಿ ಮುಂತಾದ ಪ್ರದೇಶದ ಜನರಿಗೆ ತೊಂದರೆಯಾಗಲಿದೆ. ಇಲ್ಲಿನ ಜನರಿಗಾಗಿ 7 ಕಡೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಕೋವಿಡ್ ಭೀತಿಯಿಂದ ಜನರು ಪರಿಹಾರ ಕೇಂದ್ರಗಳಿಗೆ ಬರಲು ಭಯಪಡುತ್ತಿದ್ದು, ಸಂಬಂಧಿಕರ ಮನೆಗೆ ಹೋಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇಂದು ನಂಜನಗೂಡಿನ ಪ್ರವಾಹ ಪೀಡಿತ ಪ್ರದೇಶಗಳಾದ ಹಳ್ಳದಕೇರಿ, ದೇವಸ್ಥಾನದ ಸುತ್ತಮುತ್ತ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಕೇರಳದ ವೈನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ಮೈಸೂರು ಜಿಲ್ಲೆಯ ಕಬಿನಿ, ತಾರಕ ಹಾಗೂ ನಗು ಜಲಾಶಯದಿಂದ ಕಪಿಲಾ ನದಿಗೆ 66,000 ಕ್ಯೂಸೆಕ್ ನೀರನ್ನು ಬಿಟ್ಟಿದ್ದು, ಇದರಿಂದ ರಾಷ್ಟ್ರೀಯ ಹೆದ್ದಾರಿ ಸಹ ಬಂದ್ ಆಗಲಿದೆ. ನಂಜನಗೂಡಿನ ತಗ್ಗು ಪ್ರದೇಶಗಳಾದ ಹಳ್ಳದಕೇರಿ, ತೋಪಿನ ಬೀದಿ ಮುಂತಾದ ಪ್ರದೇಶದ ಜನರಿಗೆ ತೊಂದರೆಯಾಗಲಿದೆ. ಇಲ್ಲಿನ ಜನರಿಗಾಗಿ 7 ಕಡೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಕೋವಿಡ್ ಭೀತಿಯಿಂದ ಜನರು ಪರಿಹಾರ ಕೇಂದ್ರಗಳಿಗೆ ಬರಲು ಭಯಪಡುತ್ತಿದ್ದು, ಸಂಬಂಧಿಕರ ಮನೆಗೆ ಹೋಗುತ್ತಿದ್ದಾರೆ ಎಂದು ತಿಳಿಸಿದರು.
ಕಪಿಲಾ ನದಿಯಲ್ಲಿ ನೀರು ಹೆಚ್ಚಾದರೆ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡುತ್ತೇವೆ ಎಂದರು.