ಮೈಸೂರು: ಕಳೆದ ವರ್ಷ ಉಂಟಾದ ಪ್ರವಾಹದಿಂದ ತತ್ತರಿಸಿ ಮನೆ, ಬೆಳೆ ಕಳೆದುಕೊಂಡವರು ಇನ್ನೂ ಪರಿಹಾರ ಸಿಗದೇ ಕಂಗಲಾಗಿದ್ದಾರೆ. ಪರಿಹಾರಕ್ಕಾಗಿ ಅಲೆದಲೆದು ಸುಸ್ತಾಗಿದ್ದಾರೆ. ಕಬಿನಿ ಜಲಾಶಯದಿಂದ ಹೊರ ಹರಿವು ಪ್ರಮಾಣ ಹೆಚ್ಚಾಗಿ, ಕಳೆದ ವರ್ಷ ನಂಜನಗೂಡು ತಾಲೂಕಿನ ಬೊಕ್ಕಳ್ಳಿ, ಹಿಮ್ಮಾವು, ಹಿಮ್ಮಾವುಹುಂಡಿ ಸೇರಿದಂತೆ 16 ಗ್ರಾಮಗಳಲ್ಲಿ ಮನೆಗಳು ಕುಸಿದು ಬಿದ್ದಿದ್ದವು.
ಕಳೆದ ವರ್ಷ ಪ್ರವಾಹದಿಂದ ತತ್ತರಿಸಿದವರಿಗೆ ಇನ್ನೂ ಸಿಗದ ಪರಿಹಾರ.. ಮೈಸೂರಿನ ಜನಕ್ಕೆ ಮತ್ತೆ ಸಂಕಷ್ಟ - ಪ್ರವಾಹ ಭೀತಿ
ಕಳೆದ ವರ್ಷ ಉಂಟಾಗಿದ್ದ ಪ್ರವಾಹಕ್ಕೆ ಪರಿಹಾರ ಸಿಗದೇ ಜನ ಕಂಗಲಾಗಿದ್ದು, ಈ ವರ್ಷವೂ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ.
ಅಲ್ಲದೇ ಜಮೀನುಗಳಲ್ಲಿ ಹಾಕಿದ್ದ ಭತ್ತ, ರಾಗಿ, ಕಬ್ಬು ಬೆಳೆಗಳು ಸೇರಿದಂತೆ ಇತರ ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಮನೆ ಹಾಗೂ ಬೆಳೆಯನ್ನ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕೊಡುವುದಾಗಿ ಹೇಳಿದ ಸರ್ಕಾರ, ಒಂದು ವರ್ಷ ಕಳೆದರೂ ಅತ್ತ ಸುಳಿಯಲೇ ಇಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿ ಹೋದರೆ ಸಬೂಬು ಹೇಳಿ ಕಳುಹಿಸುತ್ತಾರೆ ಎಂದು ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿಯ ಪ್ರವಾಹದಿಂದ ಸಂಕಷ್ಟ ಅನುಭವಿಸಿರುವ ಜನರು ಈ ವರ್ಷವೂ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಪರಿಹಾರವಿಲ್ಲದೇ ಮನೆ ದುರಸ್ತಿ ಮಾಡಿಸಿಕೊಳ್ಳಲಾಗದೇ, ಬೆಳೆ ನಷ್ಟದಿಂದ ನೊಂದ ಜನತೆ ಬಗ್ಗೆ ಈಗಲಾದರೂ ಸರ್ಕಾರ ಕಣ್ಣು ತೆರೆಯಲಿ ಎಂದು ಒತ್ತಾಯಿಸಿದ್ದಾರೆ.