ಮೈಸೂರು: ಕೊರೊನಾ ಕರ್ಫ್ಯೂ ಹಿನ್ನೆಲೆ ನಾಳೆಯಿಂದ ಮದ್ಯ ಸಿಗುವುದಿಲ್ಲ ಎಂಬ ಆತಂಕದಲ್ಲಿ ಮದ್ಯ ಕೊಳ್ಳಲು ಮದ್ಯಪ್ರಿಯರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಎಣ್ಣೆ ಬೇಕು ಅಣ್ಣ.. ಎಣ್ಣೆ: ಕೊರೊನಾ ಕರ್ಫ್ಯೂ ಹಿನ್ನೆಲೆ ಬಾರ್ಗಳಲ್ಲಿ ಮುಗಿಬಿದ್ದ ಮದ್ಯಪ್ರಿಯರು! - ಮದ್ಯ
ನಾಳೆ ರಾತ್ರಿಯಿಂದ ಕೊರೊನಾ ಕರ್ಫ್ಯೂ ಹಿನ್ನೆಲೆ 14 ದಿನ ಮದ್ಯ ಸಿಗಲ್ಲ ಎಂದು ಆತಂಕಗೊಂಡಿರುವ ಮದ್ಯ ಪ್ರಿಯರು ಬಾರ್ಗಳಲ್ಲಿ ಎಣ್ಣೆ ಕೊಳ್ಳಲು ಮುಗಿ ಬಿದ್ದಿದ್ದಾರೆ.
ಕೊರೊನಾ ಕರ್ಫ್ಯೂ ಹಿನ್ನೆಲೆ ಬಾರ್ಗಳಲ್ಲಿ ಮುಗಿಬಿದ್ದ ಮದ್ಯಪ್ರಿಯರು
ನಗರದ ಅನೇಕ ಬಾರ್ಗಳ ಮುಂದೆ ಬ್ರ್ಯಾಂಡ್ಗಳನ್ನ ಎಣ್ಣೆ ಪ್ರೇಮಿಗಳು ಕೇಸ್ ಕೇಸ್ ಹೊತ್ತೊಯ್ಯುತ್ತಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೊರೊನಾ ನಿಯಮಗಳು ಗಾಳಿಗೆ ತೂರಿದ್ದಾರೆ. ಬಾರ್ ಬಂದ್ ಭಯದಲ್ಲಿ ಎಣ್ಣೆ ಸ್ಟಾಕ್ ಮಾಡಿಕೊಳ್ಳುವತ್ತ ಚಿತ್ತ ಹರಿಸುತ್ತಿದ್ದಾರೆ.
ಕಳೆದ ಬಾರಿ ಲಾಕ್ಡೌನ್ ಮಾಡಿದ್ದ ಸಂದರ್ಭ ತಿಂಗಳ ಕಾಲ ಮದ್ಯದಂಗಡಿ ಬಂದ್ ಆಗಿ ನಿರಾಸೆಗೊಂಡಿದ್ದರು. ಕಳೆದ ಬಾರಿ ಆದಂತೆ ಆಗಬಾರದು ಎಂಬ ಕಾರಣಕ್ಕೆ ಬಾರ್ಗಳಲ್ಲಿ ದುಂಬಾಲು ಬಿದ್ದಿದ್ದಾರೆ.