ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಅನೈತಿಕ ಸಂಬಂಧ ಶಂಕೆ : ಇಬ್ಬರನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು - ಅನೈತಿಕ ಸಂಬಂಧ

ನಂಜನಗೂಡು ತಾಲೂಕಿನ ಗ್ರಾಮವೊಂದರಲ್ಲಿ ಯುವಕ ಹಾಗೂ ವಿವಾಹಿತ ಮಹಿಳೆ ನಡುವೆ ಅನೈತಿಕ ಸಂಬಂಧ ಆರೋಪ ಹಿನ್ನೆಲೆಯಲ್ಲಿ ಇಬ್ಬರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಲಾಗಿದೆ..

ಕಂಬಕ್ಕೆ ಕಟ್ಟಿ ಥಳಿಸದ ಗ್ರಾಮಸ್ಥರು
ಕಂಬಕ್ಕೆ ಕಟ್ಟಿ ಥಳಿಸದ ಗ್ರಾಮಸ್ಥರು

By

Published : Nov 26, 2021, 9:04 PM IST

Updated : Nov 26, 2021, 9:15 PM IST

ಮೈಸೂರು :ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಮೈಸೂರು ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ನಂಜನಗೂಡು ತಾಲೂಕಿನ ಗ್ರಾಮವೊಂದರಲ್ಲಿ ಯುವಕ ಹಾಗೂ ವಿವಾಹಿತೆಯ ನಡುವೆ ಅನೈತಿಕ ಸಂಬಂಧ ಆರೋಪ ಹಿನ್ನೆಲೆಯಲ್ಲಿ ಇಬ್ಬರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಲಾಗಿದೆ.

ವಿವಾಹಿತೆ ಪರಿ ಪರಿಯಾಗಿ ಬೇಡಿಕೊಂಡರೂ ಕೈಗೆ ಕಟ್ಟಿರುವ ಹಗ್ಗ ಬಿಚ್ಚಲು ಅಲ್ಲಿದ್ದ ಜನರು ಮುಂದಾಗಿಲ್ಲ. ಪತಿ ತೊರೆದು ತವರು ಮನೆಯಲ್ಲಿದ್ದ ಮಹಿಳೆ, ಅನೈತಿಕ‌ ಸಂಬಂಧ ಹೊಂದಿದ್ದಾಳೆ ಎಂಬುವುದು ಗ್ರಾಮಸ್ಥರ ಆರೋಪವಾಗಿದೆ.

Last Updated : Nov 26, 2021, 9:15 PM IST

ABOUT THE AUTHOR

...view details