ಮೈಸೂರು: ಮೈಸೂರು ನಗರದಲ್ಲಿ 36 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಕೇಸ್‌ಗಳು ಬಾಕಿ ಇವೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.
ಇಂದು ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, 2016 ರಿಂದ ಇಲ್ಲಿಯವರೆಗೆ 36 ಲಕ್ಷ ಕೇಸ್ ಗಳು ಬಾಕಿ ಉಳಿದಿವೆ. ಸರ್ಕಾರಕ್ಕೆ ದಂಡದ ರೂಪದಲ್ಲಿ ಬರಬೇಕಾದ ಇಂತಿಷ್ಟು ಆದಾಯ ಕಡಿಮೆಯಾದ ಬಗ್ಗೆ ಆಡಿಟ್‌ನಲ್ಲಿ ಆಕ್ಷೇಪ ಹಾಕಲಾಗಿದೆ ಎಂದು ಹೇಳಿದ್ದಾರೆ.
ನಿತ್ಯ ನಗರದಲ್ಲಿ 5 ಸಾವಿರ ಸಂಚಾರಿ ನಿಯಮದ ಉಲ್ಲಂಘನೆ ಕೇಸ್‌ಗಳು ದಾಖಲಾಗಿವೆ. ಅದರಲ್ಲಿ 500 ಕೇಸ್‌ಗಳನ್ನು ಮಾತ್ರ ಪೊಲೀಸರು ಹಾಕುತ್ತಾರೆ. ಉಳಿದ 4 ಸಾವಿರದ 500 ಕೇಸ್‌ಗಳು ಸಿಸಿಟಿವಿ ಕ್ಯಾಮರಾ ಹಾಗೂ ತಂತ್ರಜ್ಞಾನದ ಆಧಾರದ ಮೇಲೆ ದಾಖಲಾಗುತ್ತಿದೆ. ಪ್ರತಿಯೊಬ್ಬರ ಮೇಲೆ ಮೈಸೂರಿನಲ್ಲಿ 100 ಕ್ಕೂ ಹೆಚ್ಚು ಕೇಸ್ಗಳಿವೆ. ಇವರನ್ನು ಒಂದೇ ಬಾರಿ ಕಟ್ಟಿ ಎಂದರೇ ಕಟ್ಟಲು ಸಾಧ್ಯವಿಲ್ಲ. ಆರ್.ಟಿ.ಒ.ಇಲಾಖೆಯ ವೆಬ್ಸೈಟ್ ಲಿಂಕ್ ಮಾಡುವುದರ ಮೂಲಕ ಬಾಕಿ ಕ್ಲಿಯರೆನ್ಸ್ ಮಾಡುವ ಪ್ರಯತ್ನ ಯಶಸ್ವಿಯಾಗಿದೆ. ಸ್ಥಳದಲ್ಲೇ ದಂಡ ಕಟ್ಟಿ ಎಂದು ಕೇಳುವ ಉದ್ದೇಶ ಇಲಾಖೆಗೂ ಇಲ್ಲ. ಸಾಧ್ಯವಾದಷ್ಟು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ಕಡಿಮೆಯಾದರೆ ಒಳ್ಳೆಯದು ಎಂದು ತಿಳಿಸಿದ್ದಾರೆ.