ಕರ್ನಾಟಕ

karnataka

ETV Bharat / state

ಕೃಷ್ಣ ಕಲೆಯಲ್ಲಿ ಮೂಡಿದ ಬೊಮ್ಮಾಯಿ ಭಾವಚಿತ್ರ : ಕಲಾವಿದನಿಂದ ಸಿಎಂ ಗೆ ಉಡುಗೊರೆ - pencil carving of CM Basavaraj bommai made by the artist

ಪೆನ್ಸಿಲ್ ಕಾರ್ವಿಂಗ್ ನಲ್ಲಿ ಬೊಮ್ಮಾಯಿಯವರ ಭಾವಚಿತ್ರವನ್ನು ಕೆತ್ತಲಾಗಿದ್ದು, ಅದರ ಮೇಲೆ ಶ್ರೀ ಬೊಮ್ಮಾಯಿ ಎಂದು ಬರೆಯಲಾಗಿದೆ. ಬೊಮ್ಮಾಯಿಯವರ ಭಾವಚಿತ್ರವನ್ನು ಕೆತ್ತಲು ಸುಮಾರು 2 ಗಂಟೆ ತಗುಲಿರುವುದಾಗಿ ಕಲಾವಿದ ನಂಜುಂಡ ಸ್ವಾಮಿ ಹೇಳಿದ್ದಾರೆ.

pencil-carving-of-cm-basavaraj-bommai-made-by-the-artist
ಕೃಷ್ಣ ಕಲೆಯಲ್ಲಿ ಮೂಡಿದ ಸಿ.ಎಂ ಬೊಮ್ಮಾಯಿಯವರ ಭಾವಚಿತ್ರ : ಕಲಾವಿದನಿಂದ ಸಿ ಎಂ ಗೆ ಉಡುಗೊರೆ

By

Published : Jun 8, 2022, 7:45 PM IST

ಮೈಸೂರು : ಕಲಾವಿದರೊಬ್ಬರು ಪೆನ್ಸಿಲ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಭಾವಚಿತ್ರವನ್ನು ಸೂಕ್ಷ್ಮವಾಗಿ ಕೆತ್ತನೆ ಮಾಡಿ ಮುಖ್ಯಮಂತ್ರಿಗೆ ನೀಡಿದ್ದಾರೆ. ಕಲಾವಿದ ನಂಜುಂಡಸ್ವಾಮಿ ಕೃಷ್ಣ ಕಲೆಯ ಮೂಲಕ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವನ್ನು ಕೆತ್ತನೆ ಮಾಡಿ ಮುಖ್ಯಮಂತ್ರಿಗೆ ಇಂದು ಉಡುಗೊರೆ ನೀಡಿದ್ದಾರೆ.

ಮೈಸೂರು ಜಿಲ್ಲಾ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಭಾರತೀಯ ಜನತಾಪಾರ್ಟಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪೆನ್ಸಿಲ್​ನಲ್ಲಿ ಕೃಷ್ಣ ಕಲೆಯ ಮೂಲಕ ಭಾವ ಚಿತ್ರವನ್ನು ಕೆತ್ತಿದ ಉಡುಗೊರೆಯನ್ನು ಸಿಎಂ ಉಡುಗೊರೆಯಾಗಿ ನೀಡಿದ್ದು, ಕಲಾವಿದನ ಕೈಚಳಕಕ್ಕೆ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಲಾವಿದನಿಂದ ಸಿ ಎಂ ಬೊಮ್ಮಾಯಿಗೆ ಉಡುಗೊರೆ

ಪೆನ್ಸಿಲ್ ಕಾರ್ವಿಂಗ್ ವಿಶೇಷತೆಗಳು : ಪೆನ್ಸಿಲ್ ನಲ್ಲಿ ಸಿಎಂ ಬೊಮ್ಮಾಯಿಯವರ ಭಾವಚಿತ್ರವನ್ನು ಕೆತ್ತಲಾಗಿದ್ದು, ಅದರ ಮೇಲೆ ಶ್ರೀ ಬೊಮ್ಮಾಯಿ ಎಂದು ಬರೆಯಲಾಗಿದೆ. ಈ ಭಾವಚಿತ್ರವನ್ನು ಅರಳಿಸಲು ಸುಮಾರು 2 ಗಂಟೆ ತಗುಲಿರುವುದಾಗಿ ಕಲಾವಿದ ನಂಜುಂಡ ಸ್ವಾಮಿ ಹೇಳಿದ್ದಾರೆ.

ಬೊಮ್ಮಾಯಿಯವರ ಚಿತ್ರವನ್ನು ಪೆನ್ಸಿಲ್ ನಲ್ಲಿ ಕೆತ್ತಿದ ಕಲಾವಿದ

ವಿಶೇಷ ವ್ಯಕ್ತಿಗಳ ಪೆನ್ಸಿಲ್ ಕಾರ್ವಿಂಗ್ :1999 ರಿಂದ ಈ ಕೃಷ್ಣ ಕಲೆಯನ್ನು ಕರಗತ ಮಾಡಿಕೊಂಡಿರುವ ಕಲಾವಿದ ನಂಜುಂಡ ಸ್ವಾಮಿಯವರು ಈ ಹಿಂದೆ ಪ್ರಧಾನಿ ಮೋದಿ, ಸಿದ್ದರಾಮಯ್ಯ, ಪ್ರತಾಪ್ ಸಿಂಹ, ಸುಧಾ ಮೂರ್ತಿ ಸೇರಿದಂತೆ ಅನೇಕ ಗಣ್ಯರ ಪ್ರತಿಮೆಯನ್ನು ಪೆನ್ಸಿಲ್ ಕಾರ್ವಿಂಗ್ ಮಾಡಿದ್ದಾರೆ. ಮೋದಿಯವರಿಗೂ ಸಹ ಪೆನ್ಸಿಲ್ ಕಾರ್ವಿಂಗ್ ಅನ್ನು ಉಡುಗೊರೆಯಾಗಿ ನೀಡಬೇಕೆಂಬ ಆಸೆ ಇದೆ ಎಂದು ಕಲಾವಿದ ನಂಜುಂಡ ಸ್ವಾಮಿ ತಿಳಿಸಿದ್ದಾರೆ.

ಓದಿ :ಜೆಡಿಎಸ್ ಅಭ್ಯರ್ಥಿ‌ ಕಣದಿಂದ ನಿವೃತ್ತಿ ಮಾಡಿಸೋದೇ ಈಗ ಸಂಧಾನ: ಸಿದ್ದರಾಮಯ್ಯ

For All Latest Updates

TAGGED:

ABOUT THE AUTHOR

...view details