ಕರ್ನಾಟಕ

karnataka

ETV Bharat / state

ಕೊರೊನಾ ಭೀತಿಯಿಂದ ಕಣ್ಣಿನ‌ ಚಿಕಿತ್ಸೆಗೆ ಹಿಂದೇಟು: ಸಂಕಷ್ಟದಲ್ಲಿ ’ಐ’ ಡಾಕ್ಟರ್ಸ್​

ಕೊರೊನಾ ಭೀತಿಯಿಂದ ಕಣ್ಣಿನ ಚಿಕಿತ್ಸೆ ಪಡೆಯಲು ಜನರು ಆಗಮಿಸುತ್ತಿಲ್ಲ. ಎಷ್ಟೇ ಮುನ್ನೆಚ್ಚರಿಕೆ ಕೈಗೊಂಡರೂ ರೋಗಿಗಳು ಬರುತ್ತಿಲ್ಲ ಎಂದು ವೈದ್ಯರು ಹೇಳುತ್ತಾರೆ.

By

Published : Sep 24, 2020, 5:38 PM IST

ಕೊರೊನಾ ಭೀತಿಯಿಂದ ಕಣ್ಣಿನ‌ ಚಿಕಿತ್ಸೆಗೆ ಹಿಂದೇಟು
ಕೊರೊನಾ ಭೀತಿಯಿಂದ ಕಣ್ಣಿನ‌ ಚಿಕಿತ್ಸೆಗೆ ಹಿಂದೇಟು

ಮೈಸೂರು: ಕೋವಿಡ್ ಭಯದಿಂದ ಕಣ್ಣಿನ‌ ಆಸ್ಪತ್ರೆಗಳಿಗೆ ಆಪರೇಷನ್​ಗೆ ಬರಲು ರೋಗಿಗಳು ಭಯ ಪಡುತ್ತಿದ್ದಾರೆ ಎಂದು ಜಿಲ್ಲೆಯ ವೈದ್ಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಲಾಕ್​ಡೌನ್ ಬಳಿಕ ದೇಶಾದ್ಯಂತ ಎಲ್ಲ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿದ್ದು, ಅದೇ ರೀತಿ ಕಣ್ಣಿನ ಆಪರೇಷನ್ ಮಾಡುವ ಆಸ್ಪತ್ರೆಗಳಿಗೆ ರೋಗಿಗಳು ಬರಲು ಭಯ ಪಡುತ್ತಿದ್ದಾರೆ. ಕೆಲವು ಕಡೆ ಆಪರೇಷನ್​ಗಳನ್ನು ಮುಂದೂಡಲಾಗುತ್ತಿದೆ. ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೂ ಸಹ ರೋಗಿಗಳು ಮಾತ್ರ ಆಗಮಿಸುತ್ತಿಲ್ಲ. ಮುಖ್ಯವಾಗಿ ಡಯಾಬಿಟಿಸ್ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಕಣ್ಣಿನ ಆಪರೇಷನ್​ಗೆ ಬಂದರೂ ಕೋವಿಡ್​ನಿಂದ ಆಪರೇಷನ್ ಮಾಡಿಸಲು ಭಯ ಪಡುತ್ತಿದ್ದಾರೆ ಎಂದು ಡಾಕ್ಟರ್​ಗಳು ಅಭಿಪ್ರಾಯಪಡುತ್ತಾರೆ.

ಇನ್ನು ಈ ಬಗ್ಗೆ ಖಾಸಗಿ ಆಸ್ಪತ್ರೆ ವೈದ್ಯ ಡಾ. ರವಿ ಎಂಬವರು ಮಾತನಾಡಿದ್ದು, ನಗರದಲ್ಲಿ ಒಂದೊಂದು ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ತಿಂಗಳಿಗೆ 80 ರಿಂದ 100 ಸರ್ಜರಿಗಳು ಆಗುತ್ತಿದ್ದವು. ಒಟ್ಟು ಮೈಸೂರು ನಗರದಲ್ಲಿ ಒಂದು ತಿಂಗಳಿಗೆ 1000ಕ್ಕೂ ಹೆಚ್ಚು ಸರ್ಜರಿಗಳು ನಡೆಯುತ್ತವೆ. ಆದರೆ ಕೋವಿಡ್ ಸಂದರ್ಭದಲ್ಲಿ ಮಾರ್ಚ್​ನಿಂದ ಜುಲೈವರೆಗೆ ಕಣ್ಣಿನ ಸರ್ಜರಿಗಳು ಗಣನೀಯವಾಗಿ ಇಳಿದಿವೆ ಇದಕ್ಕೆ ಕೋವಿಡ್ ಭಯವೇ ಕಾರಣ ಎನ್ನುತ್ತಾರೆ ವೈದ್ಯರು.

ABOUT THE AUTHOR

...view details