ಮೈಸೂರು:ಲಾಕ್ಡೌನ್ ಸಡಿಲಿಕೆಯಲ್ಲಿ ಅಂತರ್ ಜಿಲ್ಲಾ ಸಂಚಾರಕ್ಕೂ ಅನುಮತಿ ನೀಡಿದ್ದರಿಂದ ರೈಲು ಮೂಲಕ ಖುಷಿಯಲ್ಲಿಯೇ ಪ್ರಯಾಣಿಕರು ನಗರಕ್ಕೆ ಆಗಮಿಸಿದ್ದಾರೆ.
ರಾಜ್ಯದಲ್ಲಿ ರೈಲು ಸೇವೆ ಆರಂಭ: ಬೆಂಗಳೂರಿಂದ ಮೈಸೂರಿಗೆ ಆಗಮಿಸಿದ ಪ್ರಯಾಣಿಕರಲ್ಲಿ ಸಂತಸ - ಮೈಸೂರಿನಲ್ಲಿ ಕೊರೊನಾ ಪ್ರಕರಣ
ಲಾಕ್ಡೌನ್ ಸಡಿಲಿಕೆ ನಂತರ ರಾಜ್ಯದಲ್ಲಿ ಅಂತರ್ ಜಿಲ್ಲಾ ಓಡಾಟಕ್ಕೆ ಅವಕಾಶ ಸಿಕ್ಕಿದೆ. ಈ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿಗೆ ರೈಲು ಮೂಲಕ ಜನ ಆಗಮಿಸುತ್ತಿದ್ದಾರೆ.
ಮೈಸೂರಿಗೆ ರೈಲಿನಲ್ಲಿ ಆಗಮಿಸಿದ ಪ್ರಯಾಣಿಕರು
ಬೆಂಗಳೂರಿನಿಂದ ಬೆಳಿಗ್ಗೆ 9.20ಕ್ಕೆ ಹೊರಟ ರೈಲು ಕೆಂಗೇರಿ, ರಾಮನಗರ, ಮದ್ದೂರು, ಮಂಡ್ಯ, ಪಾಂಡವಪುರ, ನಾಗನಹಳ್ಳಿ ಮೂಲಕ ನಗರ ರೈಲ್ವೆ ನಿಲ್ದಾಣ ತಲುಪಿತು. ಬೆಂಗಳೂರಿನಿಂದ ಬಂದ 63 ಮಂದಿ ಪ್ರಯಾಣಿಕರನ್ನು ರೈಲ್ವೆ ಸಿಬ್ಬಂದಿ ಸ್ವಾಗತಿಸಿದಾಗ ಅಭಿಪ್ರಾಯ ಹಂಚಿಕೊಂಡರು. ರೈಲ್ವೆ ನಿಲ್ದಾಣದಿಂದ ಪ್ರಯಾಣಿಕರು ಒಂದೇ ಮಾರ್ಗದಲ್ಲಿ ಹೊರಗೆ ಹೋಗುವ ವ್ಯವಸ್ಥೆ ಮಾಡಲಾಗಿತ್ತು.