ಮೈಸೂರು:ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದರುೂ ಜನಪ್ರತಿನಿಧಿಗಳಿಗೆ ಮಾತ್ರ ಬೈ ಎಲೆಕ್ಷನ್ ಚಿಂತೆ ಕಾಡುತ್ತಿದೆ. 17 ಅನರ್ಹ ಶಾಸಕರ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ, ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ರಾಜಕೀಯ ಪಕ್ಷಗಳು ಯೋಚಿಸುತ್ತಿವೆ.
ಜೆಡಿಎಸ್ ನಾಯಕರೊಂದಿಗೆ ಶಾಸಕ ಸಾ.ರಾ.ಮಹೇಶ್ ಸಭೆ ಹುಣಸೂರು ಕ್ಷೇತ್ರದಿಂದ 'ಜೆಸಿಬಿ'ಯಾರು?
ಮೈಸೂರು ಜಿಲ್ಲೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದರೆ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರಿಗೆ ಈಗಾಗಲೇ ಕಾಂಗ್ರೆಸ್ ಟಿಕೆಟ್ ನೀಡುವುದಾಗಿ ಹೇಳಿದೆ. ಇತ್ತ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದಿಂದ ಯಾರನ್ನು ಅಖಾಡಕ್ಕಿಳಿಸಬೇಕು ಎಂಬ ಗೊಂದಲ ದಿನೇದಿನೇ ಹೆಚ್ಚಾಗುತ್ತಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಎಚ್.ವಿಶ್ವನಾಥ್ ಅವರಿಗೆ ಟಿಕೆಟ್ ನೀಡಿತ್ತು. ಆದರೆ ಅವರಿಂದಲ್ಲೇ ಉಪಚುನಾವಣೆ ಎದುರಾಗಿದೆ ಎಂದು ಜೆಡಿಎಸ್ ಮುಖಂಡರು ಕೆಂಡ ಕಾರುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಜೊತೆಯಾಗಿ ಚುನಾವಣೆಗೆ ಹೋದರೆ ಏನು ಮಾಡಬೇಕು? ತ್ರಿಕೋನ ಸ್ಪರ್ಧೆ ಎದುರಾದರೆ ಜೆಡಿಎಸ್‍ನಿಂದ ಯಾವ ಅಭ್ಯರ್ಥಿ ಕಣಕ್ಕಿಳಿಸಬೇಕು ಎಂಬ ಚರ್ಚೆಗಳು ಜೆಡಿಎಸ್ ಪಾಳಯದಲ್ಲಿ ನಡೆಯುತ್ತಿದೆ.
ಕೈ, ತೆನೆ ಪಕ್ಷಗಳ ನಡೆ ನೋಡಿ ಕಮಲ ಅಭ್ಯರ್ಥಿ ಕಣಕ್ಕೆ?
ಕೆಲ ದಿನಗಳಿ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಅವರು ಚಿಂತನ-ಮಂಥನ ಸಭೆ ನಡೆಸಿ, ಹುಣಸೂರು ಕ್ಷೇತ್ರಕ್ಕೆ ಯಾವ ಅಭ್ಯರ್ಥಿಯನ್ನು ಕಣಕ್ಕಿಸಬೇಕು ಎಂಬ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಮತ್ತೆ ಸೆ.21ರಂದು ಮೈಸೂರಿನಲ್ಲಿ ಸಭೆ ನಡೆಸಿ, ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ದೊರೆತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡೆ ನೋಡಿ, ಬಿಜೆಪಿ ಅಭ್ಯರ್ಥಿ ಅಖಾಡಕ್ಕಿಸಲು ಸಜ್ಜಾಗುತ್ತಿದೆ.