ಮೈಸೂರು:ಸಂಸತ್ನಲ್ಲಿ ಭದ್ರತಾ ಲೋಪ ಪ್ರಕರಣದ ಪ್ರಮುಖ ಆರೋಪಿ ಮೈಸೂರಿನ ಮನೋರಂಜನ್ನ ಇಬ್ಬರು ಸ್ನೇಹಿತರನ್ನು ನಗರದ ಎರಡು ಕಡೆ ದೆಹಲಿಯ ವಿಶೇಷ ಪೊಲೀಸ್ ತಂಡ ವಿಚಾರಣೆಗೆ ನಡೆಸಿತು. ಮನೋರಂಜನ್ ಮನೆಯಲ್ಲೂ ವಿಚಾರಣೆ ಮುಂದುವರಿದಿದೆ.
ಲೋಕಸಭಾ ಕಲಾಪ ನಡೆಯುತ್ತಿದ್ದಾಗ ಸ್ಮೋಕ್ ಬಾಂಬ್ ಸಿಡಿಸಿದ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಮನೋರಂಜನ್ ಮನೆಯಲ್ಲಿ ಇಂದೂ ಸಹ ದೆಹಲಿ ಪೋಲಿಸರ ತನಿಖಾ ತಂಡ ಆಗಮಿಸಿ ಆರೋಪಿಯ ತಂದೆ ದೇವರಾಜೇಗೌಡರನ್ನು ವಿಚಾರಣೆಗೆ ಒಳಪಡಿಸಿದೆ. ಕಳೆದ 13 ದಿನಗಳಿಂದಲೂ ವಿಚಾರಣೆ ನಡೆಯುತ್ತಿದೆ. ಮನೋರಂಜನ್ ಮನೆಯ ಮೇಲ್ಭಾಗದ ಕೊಠಡಿಯಲ್ಲಿ ಆರೋಪಿಗೆ ಸಂಬಂಧಿಸಿದ ಪುಸ್ತಕಗಳು ಹಾಗೂ ಇತರ ವಸ್ತುಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.
ಬೈಕ್‌ನಲ್ಲಿ ತನಿಖಾ ತಂಡ ಸಂಚಾರ: ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಗಮಿಸಿರುವ ವಿಶೇಷ ತಂಡ, ಪೊಲೀಸ್ ಜೀಪ್ ಹಾಗೂ ಇತರ ವಾಹನಗಳನ್ನು ಬಳಸದೇ ಬೈಕ್ನಲ್ಲೇ ಸಂಚಾರ ಮಾಡುತ್ತಿದೆ. ಮನೋರಂಜನ್ ಹೇರ್ ಕಟ್ ಮಾಡಿಸುತ್ತಿದ್ದ ಕಟಿಂಗ್ ಶಾಪ್ ಮಾಲೀಕರನ್ನೂ ಎರಡು ದಿನಗಳ ಕಾಲ ವಿಚಾರಣೆ ಮಾಡಲಾಗಿತ್ತು.