ಮೈಸೂರು (ಹುಣಸೂರು):ಪಾಳು ಬಾವಿಗೆ ಬಿದ್ದಿದ್ದ ಚಿಪ್ಪುಹಂದಿಯನ್ನ ರಕ್ಷಣೆ ಮಾಡಿದ ಗ್ರಾಮಸ್ಥರು, ಬಳಿಕ ಅದನ್ನು ಅರಣ್ಯ ಇಲಾಖೆ ವಶಕ್ಕೆ ನೀಡಿರುವ ಘಟನೆ ಹುಣಸೂರು ತಾಲೂಕಿನ ಚಿಕ್ಕಾಡಿಗನಹಳ್ಳಿಯಲ್ಲಿ ನಡೆದಿದೆ.
ಮೈಸೂರು: ಬಾವಿಯಲ್ಲಿ ಬಿದ್ದಿದ್ದ ಚಿಪ್ಪು ಹಂದಿ ರಕ್ಷಣೆ - Mysore Pangolin News
ಹುಣಸೂರು ತಾಲೂಕಿನ ಚಿಕ್ಕಾಡಿಗನಹಳ್ಳಿ ಗ್ರಾಮದ ಪಾಳು ಬಾವಿಯಲ್ಲಿ ಸುಮಾರು 3 ರಿಂದ 4 ಅಡಿ ಉದ್ದ ಇರುವ ಗಂಡು ಚಿಪ್ಪುಹಂದಿ ಪತ್ತೆಯಾಗಿದ್ದು, ಗ್ರಾಮಸ್ಥರು ಚಿಪ್ಪುಹಂದಿಯನ್ನು ಮೇಲೆತ್ತಿ ಸಂರಕ್ಷಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ
ಗ್ರಾಮದ ಪಾಳು ಬಾವಿಯಲ್ಲಿ ಸುಮಾರು 3ರಿಂದ 4 ಅಡಿ ಉದ್ದವಿರುವ ಗಂಡು ಚಿಪ್ಪುಹಂದಿ ಪತ್ತೆಯಾಗಿದ್ದು, ಗ್ರಾಮಸ್ಥರು ಚಿಪ್ಪುಹಂದಿಯನ್ನು ಮೇಲೆತ್ತಿ ಸಂರಕ್ಷಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಪ್ರಾದೇಶಿಕ ಅರಣ್ಯ ವಿಭಾಗದ ಆರ್ಎಫ್ಒ ಸಂದೀಪ್ ಹಾಗೂ ಸಿಬ್ಬಂದಿ ಚಿಪ್ಪು ಹಂದಿಯನ್ನು ವಶಕ್ಕೆ ಪಡೆದು ಮಂಡ್ಯ ಜಿಲ್ಲೆಯ ಮೇಲುಕೋಟೆ ಅರಣ್ಯಪ್ರದೇಶದ ಬೆಟ್ಟದಲ್ಲಿ ಬಿಟ್ಟಿದ್ದಾರೆ.
ಚಿಪ್ಪು ಹಂದಿಗಳು ಸಾಮಾನ್ಯವಾಗಿ ಶೀತ ಪ್ರದೇಶದಲ್ಲಿ ಕಾಣಸಿಗುವುದು ಅಪರೂಪ. ಇವು ಉಷ್ಣತೆ ಹೆಚ್ಚಾಗಿರುವ ಪ್ರದೇಶದಲ್ಲಿ ಇರುವೆ - ಗೆದ್ದಲು ತಿಂದು ಬದುಕುವ ನಾಚಿಕೆ ಸ್ವಭಾವದ ಈ ಪ್ರಾಣಿಯು ಚಿಕ್ಕಾಡಿಗನಹಳ್ಳಿಯಲ್ಲಿ ಪತ್ತೆಯಾಗಿದೆ. ತೊಂದರೆ ನೀಡದೇ, ಇಲಾಖೆಗೆ ಮಾಹಿತಿ ನೀಡಿ ಚಿಪ್ಪುಹಂದಿಯ ಸಂರಕ್ಷಣೆಗೆ ಸಹಕಾರ ನೀಡಿದ ಗ್ರಾಮಸ್ಥರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.