ಕರ್ನಾಟಕ

karnataka

ETV Bharat / state

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಂಡಿತ್ ಜಸ್​ರಾಜ್ ಚಿರ ನೆನಪು - Jas Raj

ಅಂದು ಇವರ ಸಂಗೀತ ಆಲಿಸಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು ವಿಶೇಷ. ಸಾಂಸ್ಕೃತಿಕ ನಗರಿಯ ಜನತೆ ಇವರ ಕಂಠ ಸಿರಿಗೆ ಮೈಮರೆತಿದ್ದರು.

By

Published : Aug 17, 2020, 9:11 PM IST

ಮೈಸೂರು: ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮಾಂತ್ರಿಕ ಪಂಡಿತ್ ಜಸ್​ರಾಜ್ ಇಂದು ವಿಧಿವಶರಾಗಿದ್ದು, ಮೈಸೂರು ದಸರಾ ಕಾರ್ಯಕ್ರಮದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

ಮೈಸೂರು ದಸರಾದಲ್ಲಿ ಪಂಡಿತ್ ಜಸ್​ರಾಜ್

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅರಮನೆ ಮುಂಭಾಗ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 2013 ರಲ್ಲಿ ಪಂಡಿತ್ ಜಸ್​ರಾಜ್ ಅವರು ಭಾಗವಹಿಸಿ ತಮ್ಮ ಕಂಠ ಮಾಧುರ್ಯದಿಂದ ಸಂಗೀತ ರಸದೌತಣ ಉಣಬಡಿಸಿದ್ದರು. ಅಂದು ಇವರ ಸಂಗೀತ ಆಲಿಸಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು ವಿಶೇಷ. ಸಾಂಸ್ಕೃತಿಕ ನಗರಿಯ ಜನತೆ ಇವರ ಕಂಠ ಸಿರಿಗೆ ಮೈಮರೆತಿದ್ದರು.

ಆದರೆ ಹಿರಿಯ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ ಪಂಡಿತ್ ಜಸ್​ರಾಜ್ ಇಂದು ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ.

ABOUT THE AUTHOR

...view details