ಮೈಸೂರು: ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ರೆಸ್ಟೋರೆಂಟ್ ನಲ್ಲಿ ವಾಸ್ತವ್ಯ ಹೂಡಿದ್ದ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೆ.ಆರ್ ನಗರದ ಹಳಿಯೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಕೆ.ಆರ್ ನಗರ ತಾಲೂಕಿನ ಹಳಿಯೂರು ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ (34) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.
ರೆಸ್ಟೋರೆಂಟ್ನಲ್ಲಿ ತಂಗಿದ್ದ ಗ್ರಾಮ ಪಂಚಾಯಿತಿ ಸದಸ್ಯ ಹೃದಯಾಘಾತದಿಂದ ಸಾವು - haliyuruPanchayath member died in heart attack
ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೆ.ಆರ್ ನಗರದ ಹಳಿಯೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
![ರೆಸ್ಟೋರೆಂಟ್ನಲ್ಲಿ ತಂಗಿದ್ದ ಗ್ರಾಮ ಪಂಚಾಯಿತಿ ಸದಸ್ಯ ಹೃದಯಾಘಾತದಿಂದ ಸಾವು panchayath-member-died-in-heart-attack-in-mysore](https://etvbharatimages.akamaized.net/etvbharat/prod-images/768-512-15928497-thumbnail-3x2-yyy.jpg)
ರೆಸ್ಟೋರೆಂಟ್ ನಲ್ಲಿ ತಂಗಿದ್ದ ಗ್ರಾಮ ಪಂಚಾಯಿತಿ ಸದಸ್ಯ ಹೃದಯಾಘಾತದಿಂದ ಸಾವು
ಇಲ್ಲಿನ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಚುನಾವಣೆ ನಾಳೆ ನಡೆಯಲಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ 10 ಜನ ಗ್ರಾಮ ಪಂಚಾಯಿತಿ ಸದಸ್ಯರು ಮೈಸೂರಿನ ಆರ್ ಟಿ ನಗರ ಬಳಿಯಿರುವ ರೆಸಾರ್ಟ್ಗೆ ಬಂದಿದ್ದಾರೆ. ರೆಸಾರ್ಟ್ನಲ್ಲಿ ತಂಗಿದ್ದ ಸತೀಶ್ ಅವರಿಗೆ ರಾತ್ರಿ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಓದಿ :ವನ ವಿಜ್ಞಾನ ಅರಣ್ಯ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಶ್ರೀಗಂಧ ಮರ ರಾತ್ರೋರಾತ್ರಿ ನಾಪತ್ತೆ!