ಮೈಸೂರು: ಜಂಬೂಸವಾರಿಯಲ್ಲಿ ಭಾಗವಹಿಸುವ ದಸರಾ ಗಜಪಡೆಯ ಅಂದ ಹೆಚ್ಚಿಸಲು ವರ್ಣರಂಜಿತ ಬಣ್ಣದ ಚಿತ್ತಾರಗಳನ್ನು ಬಿಡಿಸಲಾಗುತ್ತದೆ.
ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ. ಈ ಜಂಬೂಸವಾರಿಯನ್ನು ಆಕರ್ಷಣೆ ಮಾಡುವ ಪ್ರಮುಖ ಆಕರ್ಷಣೀಯ ಕೇಂದ್ರಬಿಂದು ಗಜಪಡೆಗಳು. ಇಂತಹ ಗಜಪಡೆಗಳ ಅಂದವನ್ನು ಹೆಚ್ಚಿಸಲು ವರ್ಣರಂಜಿತ ಬಣ್ಣದ ಚಿತ್ತಾರಗಳನ್ನು ಆನೆಯ ಮೇಲೆ ಬಿಡಿಸಲಾಗುತ್ತದೆ.
ಪ್ರಮುಖವಾಗಿ ಗಜಪಡೆಯ ದೇಹದ ಮೇಲೆ ಸಾಂಪ್ರದಾಯಿಕ ಬಣ್ಣದ ಚಿತ್ತಾರಗಳನ್ನು ಬಿಡಿಸಲಾಗುತ್ತಿದ್ದು, ಮುಖ್ಯವಾಗಿ ಆನೆಯ ಸೊಂಡಿಲಿನ ಮೇಲೆ ಗಂಡಭೇರುಂಡ, ಕಿವಿಯ ಮೇಲೆ ಶಂಕ ಚಕ್ರ, ಆನೆಯ ಹಣೆ ಮೇಲೆ ನಾಮ, ಗಂಡು ಆನೆಯ ಎರಡು ಗಂಟೆಗಳ ಮೇಲೆ ಗಿಳಿ ಹಾಗೂ ಅದರ ದೇಹದ ಎರಡು ಕಾಲುಗಳ ಮೇಲೆ ಹೂವು, ಬಳ್ಳಿ, ಎಲೆ ಆಕಾರಗಳನ್ನು ಸಾಂಪ್ರದಾಯಿಕವಾಗಿ, ನೈಸರ್ಗಿಕ ಬಣ್ಣವನ್ನು ಬಳಸಿ ಬಣ್ಣದ ಚಿತ್ತಾರಗಳನ್ನು ಬಿಡಿಸಲಾಗುತ್ತದೆ.