ಕರ್ನಾಟಕ

karnataka

ETV Bharat / state

ಪಡುವಾರಳ್ಳಿ ದೇವು ಕೊಲೆ ಪ್ರಕರಣ: 11 ಮಂದಿಗೆ ಜೀವಾವಧಿ ಶಿಕ್ಷೆ - ಗುಂಪೊಂದು ದೇವುನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿತ್ತು

ಮೈಸೂರು ನಗರದ ಪಡುವಾರಳ್ಳಿಯಲ್ಲಿ 2016ರಲ್ಲಿ ರೌಡಿಶೀಟರ್ ದೇವೇಂದ್ರನನ್ನು ಗುಂಪೊಂದು ಕೊಲೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ 6 ವರ್ಷಗಳ‌ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ ಕೊಲೆ ಪ್ರಕರಣದಲ್ಲಿ 11 ಜನ ತಪ್ಪಿತಸ್ಥರೆಂದು ಪರಿಗಣಿಸಿ, ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

ಮೈಸೂರು
ಮೈಸೂರು

By

Published : Mar 8, 2022, 4:19 PM IST

ಮೈಸೂರು:ಪಡುವಾರಳ್ಳಿಯ ದೇವು ಎಂಬಾತನನ್ನು ದುಷ್ಕರ್ಮಿಗಳ ಗುಂಪೊಂದು 2016ರಲ್ಲಿ ಕೊಲೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ತಪ್ಪಿತಸ್ಥರೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಪರಿಗಣಿಸಿದ್ದು, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಇದರ ಜೊತೆಗೆ, ತಲಾ 32 ಸಾವಿರ ರೂ. ದಂಡ ವಿಧಿಸಿದೆ.

ವಿವರ: ಮೈಸೂರು ನಗರದ ಪಡುವಾರಳ್ಳಿಯಲ್ಲಿ 2016ರಲ್ಲಿ ರೌಡಿಶೀಟರ್ ದೇವೇಂದ್ರ ಅಲಿಯಾಸ್ ದೇವು (35) ನನ್ನು ಗುಂಪೊಂದು ಮಚ್ಚಿನಿಂದ ಕೊಚ್ಚಿ ಹಾಕಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 29 ಮಂದಿಯ ವಿರುದ್ಧ ಜಯಲಕ್ಷ್ಮಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುದೀರ್ಘ 6 ವರ್ಷಗಳ‌ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯವು ಕೊಲೆ ಪ್ರಕರಣದಲ್ಲಿ 11 ಜನ ತಪ್ಪಿತಸ್ಥರೆಂದು ಪರಿಗಣಿಸಿ ಇದೀಗ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

ಸೋಮವಾರ ಸಂಜೆ ನಗರದ ಪ್ರಧಾನ ಹಾಗೂ ಜಿಲ್ಲಾ ಸೆಷನ್ ನ್ಯಾಯಾಲಯದ ನ್ಯಾಯಾಧೀಶ ಎಲ್.‌ ರಘುನಾಥ್ ಶಿಕ್ಷೆ ಪ್ರಕಟಿಸಿದರು. ಸರ್ಕಾರದ ಪರವಾಗಿ ಸುದೀಪ್ ಬಂಗೇರ ಅವರು ವಾದ ಮಂಡಿಸಿದ್ದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಐಷಾರಾಮಿ ಕಾರುಗಳನ್ನು ಕದ್ದು ತಮಿಳುನಾಡಿನಲ್ಲಿ ಮಾರಾಟ: ಮೂವರು ಸೆರೆ

ಕೊಲೆ ಪ್ರಕರಣದ ಅಪರಾಧಿಗಳಾದ ಪವನ್, ಕುಮಾರ್, ಸುನೀಲ್, ರಾಕೇಶ್, ಕಾರ್ತಿಕ್, ಮಂಜು, ಮಣೀಕಂಠ, ನಾಗೇಂದ್ರ, ಕೆ.ಎಲ್. ಸುನೀಲ್, ವಿಜಯಕುಮಾರ್, ಕೆ.ಎಂ. ರಘು, ಆರ್.ಎಕ್ಸ್. ನವೀನ್ ಎಂಬುವವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ತಲಾ 32 ಸಾವಿರ ದಂಡ ಕಟ್ಟುವಂತೆ ಸೂಚಿಸಿದೆ.

ಖುಲಾಸೆಗೊಂಡಿರುವ ಅವ್ವ ಮಹದೇಶ್ ಹಾಗೂ ಅವನ ಸಹೋದರ ಮಂಜು ಸೇರಿದಂತೆ 18 ಮಂದಿಯನ್ನು ಬಿಡುಗಡೆಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.

ABOUT THE AUTHOR

...view details