ಕರ್ನಾಟಕ

karnataka

ETV Bharat / state

ನಿಮ್ಮಲ್ಲೆರ ಪ್ರೀತಿ, ಅಭಿಮಾನಕ್ಕೆ ನಾನು ಋಣಿ : ಪದ್ಮಶ್ರೀ ಹರೇಕಳ ಹಾಜಬ್ಬ - ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿಕೆ

ಪ್ರಶಸ್ತಿ ಬಂತು ಎಂಬುವುದಕ್ಕಿಂತ ನನ್ನ ಸೇವೆಯನ್ನು ಜನರು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದು ತುಂಬ ಖುಷಿಯಾಗಿದೆ. ಅದಕ್ಕಿಂತ ಪ್ರಶಸ್ತಿ ದೊಡ್ಡದಲ್ಲ..

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿಕೆ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿಕೆ

By

Published : Nov 21, 2021, 6:51 PM IST

ಮೈಸೂರು :ನಿಮ್ಮಲ್ಲೆರ ಪ್ರೀತಿ, ಅಭಿಮಾನಕ್ಕೆ ನಾನು ಋಣಿ. ನನ್ನಂತ ಬಡವನನ್ನು ಗುರುತಿಸುದ್ದು ನಿಮ್ಮೆಲ್ಲರ ಶ್ರೀಮಂತಿಕೆ. ಇದೇ ನನಗೆ ದೊಡ್ಡ ಪ್ರಶಸ್ತಿ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಮನದುಂಬಿ ಹೇಳಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡ್ತಿರುವುದು..

ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಏರ್ಪಡಿಸಿದ್ದ ಸಾಹಿತ್ಯ ಕನ್ನಡ ಪುಸ್ತಕ ಹಬ್ಬದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿ ಮಾತನಾಡಿದ ಅವರು, ನಾನು ಬಹಳ ಋಣಿ ಆಗಿದ್ದೇನೆ.

ಬಹಳ ಸಂತೋಷ ಆಗುತ್ತಿದೆ. ಮೈಸೂರು ಪೇಟ ತೊಡಿಸಿ ಗೌರವಿಸಿದ್ದಕ್ಕೆ ತುಂಬಾ ಖುಷಿ ಆಗಿದೆ. ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದು ಹೇಳಿದರು.

ಪ್ರಶಸ್ತಿ ಬಂತು ಎಂಬುವುದಕ್ಕಿಂತ ನನ್ನ ಸೇವೆಯನ್ನು ಜನರು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿರುವುದು ತುಂಬ ಖುಷಿಯಾಗಿದೆ. ಅದಕ್ಕಿಂತ ಪ್ರಶಸ್ತಿ ದೊಡ್ಡದಲ್ಲ ಎಂದರು.

For All Latest Updates

ABOUT THE AUTHOR

...view details