ಮೈಸೂರು:ಈ ಬಾರಿ ದಸರಾ ಕ್ರೀಡಾಕೂಟ ಹಾಗೂ ಯುವ ದಸರಾವನ್ನು ಉದ್ಘಾಟಿಸಲು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಅವರನ್ನು ಕರೆಸಲು ಪ್ರಯತ್ನಗಳು ನಡೆಯುತ್ತಿವೆ.
ದಸರಾ ಕ್ರೀಡಾಕೂಟ ಉದ್ಘಾಟನೆಗೆ ಪಿ.ವಿ. ಸಿಂಧು? - ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ. ಸಿಂಧೂ
ಮಹಾರಾಜ ಕಾಲೇಜು ಮೈದಾನದಲ್ಲಿ ಅಕ್ಟೋಬರ್ 1 ರಿಂದ ನಡೆಯಲಿರುವ ದಸರಾ ಕ್ರೀಡಾಕೂಟದ ಉದ್ಘಾಟನೆಗೆ ಪಿ.ವಿ. ಸಿಂಧೂ ಅವರನ್ನು ಕರೆಸಲು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಈಗಾಗಲೇ ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಅಕ್ಟೋಬರ್ 1 ರಿಂದ 6ರ ವರೆಗೆ ನಡೆಯುವ ದಸರಾ ಕ್ರೀಡಾಕೂಟದ ಉದ್ಘಾಟನೆಗೆ ಪಿ.ವಿ. ಸಿಂಧೂ ಅವರನ್ನು ಕರೆಸುವಂತೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಈಗಾಗಲೇ ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಿ.ವಿ ಸಿಂಧೂ ಅವರ ಸಮಯದ ಲಭ್ಯತೆಯನ್ನು ನೋಡಿಕೊಂಡು ಕ್ರೀಡಾ ಸಚಿವಾಲಯದೊಂದಿಗೆ ಮಾತುಕತೆ ನಡೆಸಿ ಸಮಯದ ನಿಗದಿ ಮಾಡಲು ಸಂಸದ ಪ್ರತಾಪ್ ಸಿಂಹ ಅವರಿಗೆ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ. ಈ ಬಾರಿ ದಸರಾ ಕ್ರೀಡಾಕೂಟ ಮತ್ತು ಯುವದಸರಾ ಉದ್ಘಾಟನೆಗೆ ಪಿ.ವಿ. ಸಿಂಧೂ ಆಹ್ವಾನಕ್ಕೆ ದಸರಾ ಸಮಿತಿ ಪ್ರಯತ್ನಿಸಿದೆ.