ಮೈಸೂರು: ಮೈಸೂರು ತಾಲೂಕಿನ ಸಿದ್ದಲಿಂಗಪುರದಲ್ಲಿರುವ ಚಂದ್ರಮೌಳೇಶ್ವರ ದೇವರಿಗೆ 45 ವರ್ಷಗಳ ನಂತರ ಆಭರಣ ಧಾರಣೆ ಯೋಗ ಒದಗಿ ಬಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ರಿಂದ 1932ರಲ್ಲಿ ದೇವಾಲಯ ನಿರ್ಮಾಣ ಮಾಡಿಸಿ, ಕಾಶಿಯಿಂದ ಬಾಣಲಿಂಗ ತರಿಸಿ ಪ್ರತಿಷ್ಠಾಪನೆ ಮಾಡಿಸಿದ್ದರು.
ಗ್ರಾಮದಲ್ಲಿ ಪುರೋಹಿತರಾಗಿದ್ದ ಸುಬ್ಬಾಶಾಸ್ತ್ರಿ ಅವರಿಂದ ಆಭರಣಗಳ ದೇಣಿಗೆ ನೀಡಲಾಗಿದ್ದು, ಚಂದ್ರಮೌಳೇಶ್ಬರನಿಗೆ ನಾಗಾಭಾರಣ, ಬೆಳ್ಳಿ ಕೊಳಗ, ಅಮ್ಮನವರಿಗೆ ಕಿರೀಟ, ಹಸ್ತ ಕಮಲಗಳು, ಪಾದ ಸೇರಿ ವಿವಿಧ ಬಗೆಯ ಆಭರಣಗಳನ್ನು ದೇಣಿಗೆ ನೀಡಲಾಯಿತು. 45 ವರ್ಷಗಳ ನಂತರ ದೇವಾಲಯಕ್ಕೆ ಬಂದ ದಾನಿಗಳ ಕುಟುಂಬದವರ ಕೋರಿಕೆಯಂತೆ ಆಭರಣಗಳ ಧಾರಣೆಗೆ ಮುಜರಾಯಿ ಇಲಾಖೆ ಅನುಮತಿ ನೀಡಿದೆ.