ಮೈಸೂರು:ತಂದೆಯ ಸಾವಿನ ನೋವಲ್ಲೂ ಅವರ ಅಂಗಾಂಗ ದಾನ ಮಾಡುವ ಮೂಲಕ ಮಕ್ಕಳು ಮಾನವೀಯತೆ ಮೆರೆದಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಗಂಜಿಗೆರೆ ಕೊಪ್ಪಲು ಗ್ರಾಮದ ರೈತ ಮೊಗಣ್ಣೆಗೌಡ (67 ವರ್ಷ) ಇದ್ದಕ್ಕಿದ್ದಂತೆ ವಿಪರೀತ ತಲೆನೋವು ಕಾಣಿಸಿಕೊಂಡು ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಮೆದುಳಿಗೆ ಸ್ಟ್ರೋಕ್ ಆಗಿ, ಮೊಗಣ್ಣೆಗೌಡ ಕೋಮಾಗೆ ಜಾರಿದ್ದರು. ವೈದ್ಯರು ಪರೀಕ್ಷೆ ಮಾಡಿದಾಗ ಮೊಗಣ್ಣೆಗೌಡ ಅವರ ಮೆದುಳು ನಿಷ್ಕ್ರಿಯಗೊಂಡಿರುವ ವಿಚಾರ ಗೊತ್ತಾಗಿತ್ತು. ಇದನ್ನು ಅವರ ಮಕ್ಕಳಿಗೆ ವೈದ್ಯರು ಮನವರಿಕೆ ಮಾಡಿದ್ದರು.