ಕರ್ನಾಟಕ

karnataka

ಸಿಡಿ ವಿಚಾರದ ಬಗ್ಗೆ ಸದನದಲ್ಲಿ ಸೋಮವಾರ ಧ್ವನಿ ಎತ್ತುತ್ತೇವೆ: ಸಿದ್ದರಾಮಯ್ಯ

By

Published : Mar 20, 2021, 6:23 PM IST

ರಮೇಶ್ ಜಾರಕಿಹೊಳಿ ಸಿಡಿ ವಿಚಾರದ ಬಗ್ಗೆ ಸದನದಲ್ಲಿ ಸೋಮವಾರ ಧ್ವನಿ ಎತ್ತುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.‌

Opposition Siddaramaiah reaction
ವಿಪಕ್ಷ ಸಿದ್ದರಾಮಯ್ಯ

ಮೈಸೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ವಿಚಾರದ ಬಗ್ಗೆ ಸೋಮವಾರ ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಸಿಡಿ ವಿಚಾರದ ಬಗ್ಗೆ ಸದನದಲ್ಲಿ ಸೋಮವಾರ ಧ್ವನಿ ಎತ್ತುತ್ತೇವೆ: ಸಿದ್ದರಾಮಯ್ಯ

ಮೈಸೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಸತೀಶ್ ಜಾರಕಿಹೊಳಿ ಹೆಸರನ್ನು ಶಿಫಾರಸು ಮಾಡಿದ್ದೇವೆ. ಬಹುತೇಕ ಸತೀಶ್ ಜಾರಕಿಹೊಳಿಗೆ ಟಿಕೆಟ್ ಫೈನಲ್ ಆಗಲಿದೆ. ಪ್ರತಾಪ್ ಗೌಡ ಪಾಟೀಲ್ ಪಕ್ಷ ತೊರೆದಿದ್ದು, ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತ, ಈ ವಿಚಾರಗಳು ಉಪಚುನಾವಣೆಯಲ್ಲಿ ಚರ್ಚೆಗೆ ಬರಲಿವೆ ಎಂದರು.

ಉಪ ಚುನಾವಣೆಗಳಲ್ಲಿ ನಾವೇ ಗೆಲ್ತೀವಿ ಎಂಬ ಸಿಎಂ ಸವಾಲಿಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಇನ್ನೇನು ಸೋಲ್ತೀವಿ ಅಂತ ಹೇಳಕಾಗುತ್ತಾ?. ವೋಟ್‌ಗಳೆಲ್ಲಾ ಯಡಿಯೂರಪ್ಪನ ಜೇಬಲಿದ್ದಾವಾ?. 17ನೇ ತಾರೀಖು ಜನತೆ ಉತ್ತರ ಕೊಡಲಿದ್ದಾರೆ ಎಂದು ಕುಟುಕಿದರು.

ವಿಶ್ವನಾಥ್ ಮಾತಿಗೆ ಲೇವಡಿ:

ರಾಜ್ಯದಲ್ಲಿ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಕುಮಾರಸ್ವಾಮಿ ಅವರ ಅಡ್ಜೆಸ್ಟ್​​​​ಮೆಂಟ್​​ ರಾಜಕಾರಣ ನಡೆಯುತ್ತಿದೆ ಎಂಬ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ವಿಶ್ವನಾಥ್ ಯಾಕೆ ಬಿಜೆಪಿಗೆ ಹೋದ್ರು? ಅವರ ಮಾತಿಗೆ ನೈತಿಕತೆ ಇದ್ಯಾ ಎಂದು ಲೇವಡಿ ಮಾಡಿದರು.

ಜಿಪಂ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಮ್ ವಿಧಿವಶ:

ಬಲರಾಮ್ ನನ್ನ ಜೊತೆ ರಾಜಕಾರಣ ಮಾಡಿಕೊಂಡು ಬಂದಿದ್ದರು. ಅವನು ಯಾವ ಚುನಾವಣೆಯನ್ನೂ ಸೋತಿರಲಿಲ್ಲ. ಅದನ್ನು ಹೆಚ್ಚು ಮನಸ್ಸಿಗೆ ತೆಗೆದುಕೊಂಡಿದ್ದಾನೆ. ಅವರ ಆತ್ಮಕ್ಕೆ ಶಾಂತಿ‌ ಕೋರುತ್ತೇನೆ ಎಂದರು.

ಓದಿ:ಕೊರೊನಾಗೆ ಲಸಿಕೆ ಬಂತು, ಬಿಜೆಪಿಯ ಭ್ರಷ್ಟಾಚಾರದ ವೈರಸ್​ಗೆ ಲಸಿಕೆ ಎಲ್ಲಿಂದ ತರುವುದು?: ಸಿದ್ದರಾಮಯ್ಯ ವ್ಯಂಗ್ಯ

ABOUT THE AUTHOR

...view details