ಮೈಸೂರು:ಭ್ರಷ್ಟಾಚಾರ ಮುಕ್ತ ಸರ್ಕಾರ ಮಾಡುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ಆದರೆ ಆಪರೇಷನ್ ಕಮಲಕ್ಕೆ ಒಬ್ಬರಿಗೆ 35 ಕೋಟಿ ಕೊಟ್ಟಿದ್ದಾರೆ ಚುನಾವಣೆ ನಡೆಸಲು 25 ಕೋಟಿ ಕೊಟ್ಟಿದ್ದಾರೆ ಇನ್ನೂ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಭ್ರಷ್ಟಾಚಾರ ಮುಕ್ತ ಮಾಡ್ತಿವಿ ಅಂತಾರೆ.. ಆಪರೇಷನ್ ಕಮಲಕ್ಕೆ 35 ಕೋಟಿ ಕೊಡ್ತಾರೆ: ಸಿದ್ದರಾಮಯ್ಯ - Operation kamala
ಭ್ರಷ್ಟಾಚಾರ ಮುಕ್ತ ಸರ್ಕಾರ ಮಾಡುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ಆದರೆ ಆಪರೇಷನ್ ಕಮಲಕ್ಕೆ ಒಬ್ಬರಿಗೆ 35 ಕೋಟಿ ಕೊಟ್ಟಿದ್ದಾರೆ ಚುನಾವಣೆ ನಡೆಸಲು 25 ಕೋಟಿ ಕೊಟ್ಟಿದ್ದಾರೆ ಇನ್ನೂ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಇಂದು ಮೈಸೂರಿನ ತಮ್ಮ ಸ್ವಗೃಹದಲ್ಲಿ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರವೂ ಎಲ್ಲಾ ಕ್ಷೇತ್ರಕ್ಕೂ ಯಾವುದೇ ಹೊಸ ಯೋಜನೆಯನ್ನು ಘೋಷಣೆ ಮಾಡದೆ ನಿರಾಶಾದಾಯಕ ಬಜೆಟ್ ಮಂಡಿಸಿದೆ. ಇದೊಂದು ಟಿಕರಿಂಗ್ ಬಜೆಟ್, ಕೇಂದ್ರ ಅರ್ಥ ಸಚಿವರಾದ ನಿರ್ಮಲಾ ಸೀತಾರಾಮನ್ ಇದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಹೇಳಿದರು.
ಇನ್ನೂ ಆಪರೇಷನ್ ಕಮಲದ ಬಗ್ಗೆ ವಿಶ್ವನಾಥ್ ಪುಸ್ತಕ ಬರೆಯುವ ಕುರಿತು ಪ್ರತಿಕ್ರಿಯಿಸಿದ ಸಿದ್ದು, ಅವರು ದೊಡ್ಡ ಬರಹಗಾರರು ಬರೆಯಲಿ ಬಿಡಿ, ಆದರೆ ಅದನ್ನ ಯಾರು ಓದುತ್ತಾರೋ ಗೊತ್ತಿಲ್ಲ ಎಂದು ಹೇಳಿದರು. ಆಪರೇಷನ್ ಕಮಲ ಮಾಡಿ ಚುನಾವಣೆಯಲ್ಲಿ ಗೆದ್ದಿರುವವರು ಅತಂತ್ರರಾಗಿದ್ದಾರೆ ಎಂಬ ಪ್ರಶ್ನೆಗೆ, ನನ್ನ ದೃಷ್ಟಿಯಲ್ಲಿ ಪಕ್ಷ ದ್ರೋಹ ಮಾಡಿದವರಿಗೆ ಹಾಗೆ ಆಗಲೇ ಬೇಕು ಎಂದರು.