ಮೈಸೂರು: ಅರಣ್ಯ ಇಲಾಖೆ ಚಿರತೆ ಸೆರೆ ಕಾರ್ಯಾಚರಣೆ ಕೈಗೊಂಡಿರುವುದರಿಂದ ಸೆಸ್ಕಾಂನಿಂದ ತಿ.ನರಸೀಪುರ ತಾಲ್ಲೂಕು ವ್ಯಾಪ್ತಿಯ ಐ.ಪಿ, ಸೆಟ್ ಫೀಡರ್‌ಗಳಿಗೆ ಎರಡು ಪಾಳಿಯಲ್ಲಿ ವಿದ್ಯುತ್ ಪೂರೈಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಿ.ನರಸೀಪುರದಲ್ಲಿ ಚಿರತೆ ಸೆರೆ ಕಾರ್ಯಾಚರಣೆ: 2 ಪಾಳಿಯಲ್ಲಿ ವಿದ್ಯುತ್ ಪೂರೈಕೆ - ಈಟಿವಿ ಭಾರತ ಕನ್ನಡ
ಮೈಸೂರಿನಲ್ಲಿ ತಿ.ನರಸೀಪುರ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಡಿ.7ರಿಂದ 16ರವರೆಗೆ 7 ಗಂಟೆಗಳ 3 ಪೇಸ್ ವಿದ್ಯುತ್ ಸರಬರಾಜನ್ನು ಎರಡು ಪಾಳಿಯಲ್ಲಿ ಪೂರೈಸಲಾಗುವುದು ಎಂದು ಸೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಚಿರತೆ ಸೆರೆ ಕಾರ್ಯಾಚರಣೆ : ಎರಡು ಪಾಳಿಯಲ್ಲಿ ವಿದ್ಯುತ್ ಪೂರೈಕೆ
ತಾಲ್ಲೂಕು ವ್ಯಾಪ್ತಿಯಲ್ಲಿನ ಐ.ಪಿ, ಸೆಟ್ ಫೀಡರ್‌ಗಳಿಗೆ ರಾತ್ರಿ ವೇಳೆ ವಿದ್ಯುತ್ ಪೂರೈಸಲಾಗುತ್ತಿದ್ದ ಅವಧಿಯನ್ನು ಮಾರ್ಪಡಿಸಿ, ಡಿ.7 ರಿಂದ 16 ರವರೆಗೆ (10 ದಿನಗಳು) ಹಗಲು ವೇಳೆಯಲ್ಲಿ ಬೆಳಗ್ಗೆ 8.30 ರಿಂದ ಸಂಜೆ 6ರವರೆಗೆ, 7 ಗಂಟೆಗಳ 3 ಪೇಸ್ ವಿದ್ಯುತ್ ಸರಬರಾಜನ್ನು ಎರಡು ಪಾಳಿಗಳಲ್ಲಿ ಪೂರೈಸಲಾಗುವುದು ಎಂದು ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ.
ಇದನ್ನೂ ಓದಿ :ಹೆಚ್ಚಿದ ಚಿರತೆ ಹಾವಳಿ: ಕಬ್ಬು ಕಟಾವು ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಆದೇಶ