ಮೈಸೂರು:ಸರ್ಕಾರದ ಒಂದೇ ಒಂದು ಹುದ್ದೆಗೆ ಸಾವಿರಾರು ಅರ್ಜಿಗಳು ಬರುವುದು ಸರ್ವೇ ಸಾಮಾನ್ಯ. ಆದರೆ ಅದೇ ಸರ್ಕಾರಿ ಹುದ್ದೆಯ 242 ಸ್ಥಾನಗಳಿಗೆ ಕೇವಲ 27 ಮಂದಿಯಷ್ಟೇ ಅರ್ಜಿ ಹಾಕಿದ್ದಾರೆ.ಹೌದು, ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ವೈದ್ಯಕೀಯ ಸೇವೆಗಾಗಿ ಸಿನಿಯರ್ ರೆಸಿಡೆನ್ಸಿ ಡಾಕ್ಟರ್, ಜೂನಿಯರ್ ರೆಸಿಡೆನ್ಸಿ ಡಾಕ್ಟರ್, ಸ್ಟಾಫ್ ನರ್ಸ್ ಸರಿದಂತೆ 242 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಆದರೆ ಆಕಾಂಕ್ಷಿಗಳ ಪೈಕಿ 27 ಮಂದಿಯಷ್ಟೇ ಅರ್ಜಿ ಸಲ್ಲಿಸಿದ್ದಾರೆ.
18 ಸಿನಿಯರ್ ರೆಸಿಡೆನ್ಸಿ ಡಾಕ್ಟರ್(ತಿಂಗಳ ವೇತನ 2.50 ಲಕ್ಷ ರೂ.) ಹುದ್ದೆಗಳು, 14 ಸಿನಿಯರ್ ರೆಸಿಡೆನ್ಸಿ( ಪಲ್ಮನಾಲಜಿಸ್ಟ್) ಹುದ್ದೆಗಳು, 22 ಸಿನಿಯರ್ ರೆಸಿಡೆನ್ಸಿ(ಅನಸ್ತೇಷಿಯ) ಹುದ್ದೆಗಳು,29 ಜೂನಿಯರ್ ರೆಸಿಡೆನ್ಸಿ ಡಾಕ್ಟರ್ (1.10 ಲಕ್ಷ ರೂ.ಸಂಬಳ) ಹುದ್ದೆಗಳು, 159 ಸ್ಟಾಪ್ ನರ್ಸ್ಗಳು (ತಿಂಗಳ ವೇತನ 28ಸಾವಿರ ರೂ.) ಹುದ್ದೆಗಳಿಗೆ ಅರ್ಜಿ ಅಹ್ವಾನ ಮಾಡಲಾಗಿತ್ತು.