ಮೈಸೂರು:ಸುತ್ತೂರಿನ ದಿವಂಗತ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ 104ನೇ ಜನ್ಮ ದಿನಾಚರಣೆ ಅಂಗವಾಗಿ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ 1ಲಕ್ಷ ರೂ. ನೀಡಲಾಯಿತು.
ನಾಳೆ (ಆ.29) ಸುತ್ತೂರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಜಯಂತಿ ಇದ್ದು, ಈ ಹಿನ್ನಲೆ ಮೃಗಾಲಯದ ಪ್ರಾಣಿಗಳ ಆಹಾರದ ವೆಚ್ಚದ ನಿರ್ವಹಣೆಗಾಗಿ ಚೆಕ್ ನೀಡಲಾಗಿದೆ.
ಸುತ್ತೂರು ಶ್ರೀಗಳ ಜಯಂತಿ: ಮೈಸೂರು ಮೃಗಾಲಯಕ್ಕೆ ಒಂದು ಲಕ್ಷದ ಚೆಕ್ ವಿತರಣೆ - Sri Chamarajendra Zoological Gardens
ಸುತ್ತೂರು ಶ್ರೀಗಳ ಜಯಂತಿ ಅಂಗವಾಗಿ ಮೈಸೂರು ಮೃಗಾಲಯಕ್ಕೆ ಒಂದು ಲಕ್ಷ ರೂಗಳ ಚೆಕ್ ವಿತರಿಸಲಾಯಿತು. ಪ್ರತೀ ವರ್ಷ ಶ್ರೀಗಳ ಜನ್ಮ ದಿನದಂದು ಮಠದ ವತಿಯಿಂದ ಮೃಗಾಲಯಕ್ಕೆ ಧನ ಸಹಾಯ ನೀಡಲಾಗುತ್ತಿದೆ.
ಮೃಗಾಲಯಕ್ಕೆ ಒಂದು ಲಕ್ಷದ ಚೆಕ್ ವಿತರಣೆ
ಮೃಗಾಲಯದ ಆವರಣದಲ್ಲಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಅಜಿತ್ ಕುಲಕರ್ಣಿಗೆ ಚೆಕ್ ಹಸ್ತಾಂತರ ಮಾಡಲಾಯಿತು. ಕಳೆದ ಒಂಬತ್ತು ವರ್ಷಗಳಿಂದ ಸುತ್ತೂರು ಮಠ ಮೃಗಾಲಯಕ್ಕೆ ಧನ ಸಹಾಯ ನೀಡುತ್ತಾ ಬರುತ್ತಿದೆ.