ಕರ್ನಾಟಕ

karnataka

ETV Bharat / state

Death Certificate: ಬದುಕಿರುವಾಗಲೇ ಡೆತ್ ಸರ್ಟಿಫಿಕೇಟ್ ಕೊಟ್ಟ ಅಧಿಕಾರಿಗಳು! - ಮುಖ್ಯಮಂತ್ರಿ ಸಿದ್ದರಾಮಯ್ಯ

ಈ ಪ್ರಕರಣದ ಬಗ್ಗೆ ದೂರು ಸಲ್ಲಿಸಿರುವ ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ನಗರ್ಲೆ ಎಂ ವಿಜಯಕುಮಾರ್ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Basamma who recieved death cirtificate
ಮರಣ ಪ್ರಮಾಣ ಪತ್ರ ಪಡೆದ ಬಸಮ್ಮ ಅಜ್ಜಿ

By

Published : Jun 17, 2023, 4:12 PM IST

Updated : Jun 17, 2023, 4:59 PM IST

ಬದುಕಿರುವಾಗಲೇ ಡೆತ್ ಸರ್ಟಿಫಿಕೇಟ್ ಕೊಟ್ಟ ಅಧಿಕಾರಿಗಳು

ಮೈಸೂರು: ಜೀವಂತ ಇರುವಾಗಲೇ ಅಜ್ಜಿ ಮತ್ತು ವ್ಯಕ್ತಿಯನ್ನು ಸಾಯಿಸಿ ಮರಣ ಪತ್ರ ನೀಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ನಂಜನಗೂಡು ತಾಲೂಕಿನ ಗೀಕಹಳ್ಳಿ ಗ್ರಾಮದ ಬಸಮ್ಮ ಎಂಬ ಅಜ್ಜಿಗೆ ಜೀವಂತವಿದ್ದರೂ ಮರಣ ದೃಢೀಕರಣ ಪತ್ರವನ್ನು ಸೃಷ್ಟಿ ಮಾಡಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ.

ಬಸಮ್ಮ 15-03-1981 ರಲ್ಲೇ ಮರಣ ಹೊಂದಿದ್ದಾಳೆ ಎಂದು ಮರಣ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆಯಿಂದ ನೀಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ನಂಜನಗೂಡು ತಾಲೂಕಿನ ಮುಳ್ಳೂರು ಗ್ರಾಮದ ಚಂದ್ರಶೇಖರ್ ಎಂಬ ವ್ಯಕ್ತಿಯ ಪಿತ್ರಾರ್ಜಿತ ಆಸ್ತಿಯನ್ನು ಕಬಳಿಕೆ ಮಾಡಲು ವಿದೇಶದಲ್ಲಿರುವ ಚಂದ್ರಶೇಖರ್ ಅವರು ಬದುಕಿದ್ದರೂ ಡೆತ್ ಸರ್ಟಿಫಿಕೇಟ್ ಮಾಡಿ ಪೌತಿ ಖಾತೆ ಸೃಷ್ಟಿ ಮಾಡಿದ್ದಾರೆ ಎಂದು ದೂರಲಾಗಿದೆ.

ಮುಳ್ಳೂರು ಗ್ರಾಮದ ಸರ್ವೇ ನಂ. 442 ರಲ್ಲಿ 01.26 ಹಾಗೂ 444 ರಲ್ಲಿ 01.30 ಗುಂಟೆ ಆಸ್ತಿಯನ್ನು ಕೃಷ್ಣೇಗೌಡ, ಶಿವಮಲ್ಲೇಗೌಡ ಎಂಬುವರಿಗೆ ಅಕ್ರಮವಾಗಿ ಪೌತಿ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ. 2022 ನೇ ಸಾಲಿನಲ್ಲಿ ಅಧಿಕಾರಿಗಳು ಪ್ರಮಾದ ಎಸಗಿರುವ ಆರೋಪ ಕೇಳಿಬಂದಿದೆ.

ಇನ್ನೂ ಬಸಮ್ಮನ ಹೆಸರಲ್ಲಿ ಸರ್ವೇ ನಂ.140/2 ರಲ್ಲಿ 01 ಎಕರೆ ಜಮೀನು ಪೌತಿ ಖಾತೆ ಮಾಡಲಾಗಿದ್ದು, 19-07-2022 ರಂದು ಎರಡು ಪ್ರಕರಣಗಳಲ್ಲಿ ನಕಲಿ ವಂಶ ವೃಕ್ಷ ದೃಢೀಕರಣ ಪತ್ರ ಸೃಷ್ಟಿಸಿ, ಮತ್ತೊಬ್ಬರಿಂದ ನಾವೇ ಬಸಮ್ಮನ ಹೆಣ್ಣು ಮಕ್ಕಳು ಎಂದು ಪೌತಿ ಖಾತೆಗೆ ಅರ್ಜಿಯನ್ನು ಹಾಕಿಸಿದ್ದಾರೆ.‌ ಆದರೆ, ಶಿವಮ್ಮ, ರತ್ನಮ್ಮ ಎಂಬುವರು ಬಸಮ್ಮನ ಹೆಣ್ಣು ಮಕ್ಕಳೇ ಅಲ್ಲ ಎಂದು ತಿಳಿದು ಬಂದಿದೆ. ಶಿವಮ್ಮ, ಮತ್ತು ರತ್ನಮ್ಮ ಎಂಬ ಮಹಿಳೆ ಬೇರೆ ಜನಾಂಗದವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ. ಗ್ರಾಮಸ್ಥರನ್ನು ಕೇಳಿಲ್ಲ ಜಮೀನಿನ ಸ್ಥಳ ಪರಿಶೀಲನೆ ಮಾಡಿಲ್ಲ. ಹಣದಾಸೆಗೆ ದಾಖಲೆಗಳನ್ನು ಸೃಷ್ಟಿಸಿ, ಪರಿಶೀಲಿಸದೆ ಅಂದಿನ ತಹಶೀಲ್ದಾರ್ ಸಹಿ ಹಾಕಿ ಅಕ್ರಮಕ್ಕೆ ಕಾರಣರಾಗಿದ್ದಾರೆ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ಇಂತಹ ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ನಗರ್ಲೆ ಎಂ ವಿಜಯಕುಮಾರ್ ಒತ್ತಾಯ ಮಾಡಿದ್ದಾರೆ. ಇವರು ನೀಡಿದ ದೂರಿನಂತೆ ಈ ಪ್ರಕರಣಕ್ಕೆ ಸಂಬಂಧಿಸಿ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ವಿಜಯಪುರ: ಬದುಕಿರುವಾಗಲೇ ವೃದ್ಧೆಗೆ ಮರಣ ಪ್ರಮಾಣಪತ್ರ ನೀಡಿದ್ರಾ ಅಧಿಕಾರಿಗಳು?

Last Updated : Jun 17, 2023, 4:59 PM IST

ABOUT THE AUTHOR

...view details