ಮೈಸೂರು: ರೈತರು ತಾವು ಬೆಳೆದ ಬೆಳೆಯನ್ನು ಸರ್ಕಾರ ಖರೀದಿ ಮಾಡಲು ಸಹಕರಿಸುತ್ತದೆ ಜೊತೆಗೆ ಬೆಂಬಲ ಬೆಲೆಯನ್ನು ನೀಡುತ್ತದೆ ಎಂದು ನಂಬುತ್ತಾರೆ. ಆದರೆ, ಈ ಅಧಿಕಾರಿಗಳು ರೈತರಿಂದ ಹಣ ಕೀಳಲು ಮುಂದಾಗಿದ್ದಾರೆ. ರೈತರಿಂದ ನಿರ್ದಿಷ್ಟ ಪ್ರಮಾಣದ ಬೆಳೆ ಖರೀದಿಸಲು ಅಧಿಕಾರಿಗಳು ಹಣ ವಸೂಲಿ ಮಾಡುತ್ತಿರುವ ಘಟನೆ ವರದಿಯಾಗಿದೆ.
ಮೈಸೂರು: ದುಡ್ಡು ಕೊಟ್ಟರೆ ರಾಗಿ ಖರೀದಿ, ಅಧಿಕಾರಿಗಳ ಕಳ್ಳಾಟಕ್ಕೆ ರೈತರು ಕಂಗಾಲು - officers demanding money from farmers in mysore
ರೈತರಿಂದ ರಾಗಿ ಬೆಳೆ ಖರೀದಿಸಲು ಹಣ ವಸೂಲಿ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ರಾಗಿ ಖರೀದಿ ಕೇಂದ್ರದಲ್ಲಿ ನಡೆದಿದ್ದು, ಈ ದೃಶ್ಯವನ್ನು ರೈತರೊಬ್ಬರು ತಮ್ಮ ಮೊಬೈಲ್ ಮೂಲಕ ಸೆರೆಹಿಡಿದಿದ್ದಾರೆ.

ಮೈಸೂರು: ದುಡ್ಡು ಕೊಟ್ಟರೆ ರಾಗಿ ಖರೀದಿ, ಅಧಿಕಾರಿಗಳ ಕಳ್ಳಾಟಕ್ಕೆ ರೈತರು ಕಂಗಾಲು
ದುಡ್ಡು ಕೊಟ್ಟರೆ ಮಾತ್ರ ರಾಗಿ ಖರೀದಿ ಅಧಿಕಾರಿಗಳ ಕಳ್ಳಾಟಕ್ಕೆ ರೈತರು ಕಂಗಾಲು
ರೈತರಿಂದ ಹಣ ವಸೂಲಿ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ರಾಗಿ ಖರೀದಿ ಕೇಂದ್ರದಲ್ಲಿ ನಡೆದಿದ್ದು, ಈ ದೃಶ್ಯವನ್ನು ರೈತರೊಬ್ಬರು ತಮ್ಮ ಮೊಬೈಲ್ ಮೂಲಕ ಸೆರೆಹಿಡಿದಿದ್ದಾರೆ. ರೈತರಿಂದ ಒಂದು ಲೋಡ್ ರಾಗಿ ಖರೀದಿಸಲು, ಅಧಿಕಾರಿಗಳು 2 ಸಾವಿರ ರೂ. ವಸೂಲಿ ಮಾಡುತ್ತಿರುವುದಾಗಿ ಹೇಳಲಾಗಿದೆ. ಸದ್ಯ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ರೈತರು ಕಂಗಾಲಾಗಿರುವಾಗ ಅಧಿಕಾರಿಗಳು ರೈತರಿಂದ ಬೆಳೆ ಖರೀದಿಸಲು ನಿರ್ದಿಷ್ಟ ಮೊತ್ತವನ್ನು ಪಾವತಿಸುವಂತೆ ಹೇಳುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.
ಓದಿ :ಸೋಲಿನ ಇತಿಹಾಸ ಬೇಡ, ಗೆಲುವಿನ ಇತಿಹಾಸ ಹೇಳಬೇಕಿದೆ: ಸಚಿವ ಬಿ.ಸಿ. ನಾಗೇಶ