ಕರ್ನಾಟಕ

karnataka

ETV Bharat / state

ಖಂಡಿತವಾಗಿ ಸಿಎಂ ಬದಲಾವಣೆ ಆಗೇ ಆಗುತ್ತದೆ: ಹೆಚ್. ವಿಶ್ವನಾಥ್!

ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೇ ಆಗುತ್ತದೆ ಎಂದು ಎಂಎಲ್​ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಎಂಎಲ್​ಸಿ ಹೆಚ್. ವಿಶ್ವನಾಥ್
ಎಂಎಲ್​ಸಿ ಹೆಚ್. ವಿಶ್ವನಾಥ್

By

Published : Jul 20, 2021, 11:10 AM IST

Updated : Jul 20, 2021, 11:58 AM IST

ಮೈಸೂರು: ಸಿಎಂ ಬದಲಾವಣೆ ಆಗುತ್ತದೆ ಎಂದು ದೆಹಲಿಯೇ ಹೇಳುತ್ತಿದೆ. ದೆಹಲಿ ಹೈಕಮಾಂಡ್ ಏನು ಹೇಳುತ್ತಿದೆಯೋ ಅದನ್ನೇ ನಾವು ಹೇಳುತ್ತಿದ್ದೇವೆ. ಸಿಎಂ ಬದಲಾವಣೆ ಖಚಿತ ಎಂದು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಎಂಎಲ್​ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಖಂಡಿತವಾಗಿ ಸಿಎಂ ಬದಲಾವಣೆ ಆಗೇ ಆಗುತ್ತದೆ: ಹೆಚ್. ವಿಶ್ವನಾಥ್!

ಎಲ್ಲಾ ಪಕ್ಷಗಳಲ್ಲೂ ಈ ಪ್ರಕ್ರಿಯೆಯಿದೆ

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಆಡಿಯೋ ಹರಿಬಿಡಲಾಗಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಸಹಜ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಈ ರೀತಿಯ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಬಿಜೆಪಿಯಲ್ಲಿಯೂ ಇದೆ ಅಷ್ಟೇ ಎಂದರು.

ಭವಿಷ್ಯಕ್ಕೆ ಒಳ್ಳೆಯದಾಗುವ ದೃಷ್ಟಿಯಿಂದ ಈ ಪ್ರಕ್ರಿಯೆ

ಇದು ಕರ್ನಾಟಕ ರಾಜ್ಯದ ಆಡಳಿತ, ಅಭಿವೃದ್ಧಿ ಹಾಗೂ ಭಾರತೀಯ ಜನತಾ ಪಾರ್ಟಿಯ ಮುಂದಿನ ಭವಿಷ್ಯಕ್ಕೆ ಒಳ್ಳೆಯದಾಗುವ ದೃಷ್ಟಿಯಿಂದ ಈ ಪ್ರಕ್ರಿಯೆ ನಡೆಯುತ್ತಿದೆ. ಯಡಿಯೂರಪ್ಪರಿಗೆ ಸಂಧ್ಯಾ ಕಾಲವಿದು. ಈ ಕಾಲದಲ್ಲಿ ಅವರು ಸಾರ್ವಜನಿಕವಾಗಿ ಹಾಗೂ ರಾಜಕೀಯವಾಗಿ ಗೌರವಯುತವಾಗಿ ವಿದಾಯ ಹೇಳಬೇಕು, ಅದನ್ನು ಹೊರತುಪಡಿಸಿ ಬೇರೇನೂ ಇಲ್ಲ. ಸಿಎಂ ಬದಲಾವಣೆ ಖಂಡಿತವಾಗಿ ಆಗೇ ಆಗುತ್ತದೆ ಎಂದರು.

ಪ್ರತ್ಯೇಕ ಸಭೆಯಿಂದ ಏನೂ ಆಗಲ್ಲ

ಕಾಂಗ್ರೆಸ್​ನಿಂದ ಬಂದು ಬಿಜೆಪಿಯಲ್ಲಿ ಸಚಿವರಾದವರು ಇಂದು ಸಿಎಂ ಬದಲಾವಣೆ ವದಂತಿ ವಿಚಾರವಾಗಿ, ಪ್ರತ್ಯೇಕವಾಗಿ ಸಭೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ಸಭೆಯಿಂದ ಏನು ಆಗುವುದಿಲ್ಲ. ಹೊರಗಿನಿಂದ ಬಂದವರು ಅಂತಾ ಏನು ಇಲ್ಲ. ಅವರು ಈಗ ಬಿಜೆಪಿಯಲ್ಲೇ ಇದ್ದಾರೆ ಎಂದು ಸ್ಪಷ್ಟಪಡಿಸಿದರು.

ನನ್ನ ಫೋನ್ ಕೂಡ ಟ್ಯಾಪಿಂಗ್ ಆಗಿತ್ತು

ಫೋನ್ ಟ್ಯಾಪಿಂಗ್ ಆಗುತ್ತಿದೆ ಎಂದು ಶಾಸಕ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್​, ಪೋನ್ ಟ್ಯಾಪಿಂಗ್ ಯಾವಾಗಲೂ ನಡೆಯುತ್ತಲೇ ಇರುತ್ತದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನನ್ನನ್ನು ಸೇರಿ 700 ಜನರ ಪೋನ್​​ಗಳನ್ನು ಟ್ಯಾಪಿಂಗ್ ಮಾಡಲಾಗಿತ್ತು. ಆದರೆ ಏನು ಆಗಲಿಲ್ಲ. ಫೋನ್​ ಟ್ಯಾಪಿಂಗ್​​ನಿಂದ ರಾಜಕೀಯದಲ್ಲಿ ಏನು ಮಾಡಲು ಸಾಧ್ಯವಿಲ್ಲ. ರಾಜಕಾರಣದಲ್ಲಿ ಯಾವ ವಿಚಾರವೂ ಗೌಪ್ಯವಾಗಿ ಇರುವುದಿಲ್ಲ ಎಂದರು.

Last Updated : Jul 20, 2021, 11:58 AM IST

ABOUT THE AUTHOR

...view details