ಕರ್ನಾಟಕ

karnataka

ಸಂಪುಟ ವಿಸ್ತರಣೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ: ಮುರುಗೇಶ್ ನಿರಾಣಿ

By

Published : Aug 10, 2020, 2:34 PM IST

ಪಿಎಸ್​​ಎಸ್​​ಕೆ ಕಾರ್ಖಾನೆಗೆ ನಾಳೆ‌ ಪೂಜೆ ನಡೆಯಲಿದೆ. ಆ.20ರಿಂದ ಕಬ್ಬು ಅರೆಯುವ ಕಾರ್ಯ ಆರಂಭಗೊಳ್ಳಲಿದೆ ಎಂದು ನಿರಾಣಿ ಗ್ರೂಪ್ ಅಧ್ಯಕ್ಷ ಮುರುಗೇಶ್. ಆರ್​. ನಿರಾಣಿ ತಿಳಿಸಿದ್ದಾರೆ.

Murugesh. R. Nirani
ಸಂಪುಟ ವಿಸ್ತರಣೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ: ಮುರುಗೇಶ್ ನಿರಾಣಿ

ಮೈಸೂರು: ನಾನು ಯಾವ ಸಂಪುಟ ವಿಸ್ತರಣೆ ಬಗ್ಗೆಯ ತಲೆ ಕೆಡಿಸಿಕೊಂಡಿಲ್ಲ ಎಂದು ಶಾಸಕ ಹಾಗೂ ನಿರಾಣಿ ಗ್ರೂಪ್ ಅಧ್ಯಕ್ಷ ಮುರುಗೇಶ್ ನಿರಾಣಿ ಹೇಳಿದರು.

ಸಂಪುಟ ವಿಸ್ತರಣೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ: ಮುರುಗೇಶ್ ನಿರಾಣಿ

ಖಾಸಗಿ ಹೋಟೆಲ್​​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಕೊಟ್ಟರೂ ಬಿಜೆಪಿಯಲ್ಲೇ ಇರ್ತೀನಿ. ಕೊಡದಿದ್ದರೂ ಬಿಜೆಪಿಯಲ್ಲೇ ಇರ್ತೀನಿ. ನಾನು ಸಚಿವನಾಗಿ ಪಿಎಸ್‌ಎಸ್‌ಕೆ ಗುತ್ತಿಗೆ ಪಡೆದಿದ್ದರೆ ಬೇರೆ ಅರ್ಥ ಕಲ್ಪಿಸುತ್ತಿದ್ದರು. ನಾನು ಶಾಸಕನಾಗಿ 5 ಸಕ್ಕರೆ ಕಾರ್ಖಾನೆ ನಡೆಸುತ್ತಿದ್ದೇನೆ. ನನಗೆ ಸಿಎಂ ಬದಲಾವಣೆ ವಿಚಾರವೇ ಗೊತ್ತಿಲ್ಲ. ಪಕ್ಷದ ಹೈಕಮಾಂಡ್ ಹಾಗೂ ಪಕ್ಷದ ಮುಖಂಡರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.

ನಾಳೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಪಿಎಸ್​​ಎಸ್​​ಕೆ ಕಾರ್ಖಾನೆಗೆ ಪೂಜೆ‌ ನಡೆಯಲಿದೆ. ಆ.20ರಿಂದ ಕಬ್ಬು ಅರೆಯುವ ಕಾರ್ಯ ಆರಂಭಗೊಳ್ಳಲಿದೆ. ಈ ಮೊದಲಿದ್ದ ಕಾರ್ಮಿಕರೆಲ್ಲ ಮುಂದುವರೆಯಲಿದ್ದಾರೆ. ಯಾರನ್ನೂ ಕೈ ಬಿಡುವ ಪ್ರಶ್ನೆಯೇ ಇಲ್ಲ. ರೈತರು, ಕಾರ್ಮಿಕರ ಹಿತದೃಷ್ಟಿಯಿಂದ ಕಾರ್ಖಾನೆ ನಡೆಸುತ್ತಿದ್ದೇವೆ. ಮಂಡ್ಯ, ಮೈಸೂರು ಭಾಗದ ಕಾರ್ಮಿಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈಗ ಕೆ.ಆರ್ ನಗರದ ಶ್ರೀರಾಮ ಸಕ್ಕರೆ ಕಾರ್ಖಾನೆಯ ಗುತ್ತಿಗೆ ಸಿಕ್ಕಿದೆ. ಅಯೋಧ್ಯಾ ರಾಮಮಂದಿರ ಶಂಕು ಸ್ಥಾಪನೆಯಂದೇ ನನಗೆ ಗುತ್ತಿಗೆ ದೊರೆತಿರುವುದು ಸಂತಸ ತಂದಿದೆ ಎಂದರು.

ಶ್ರೀರಾಮ ಸಕ್ಕರೆ ಕಾರ್ಖಾನೆಯಲ್ಲಿ ಹೊಸ ಮಿಷನರಿಗಳ ಅಳವಡಿಕೆ ಕಾರ್ಯ ಪ್ರಾರಂಭಿಸಲಿದ್ದೇವೆ. ಇನ್ನು ಒಂದು ವರ್ಷದಲ್ಲಿ ಕಬ್ಬು ಅರೆಯುವ ಕಾರ್ಯ ಪುನಾರಂಭವಾಗಲಿದೆ‌ ಎಂದು ಅವರು ತಿಳಿಸಿದರು.

ABOUT THE AUTHOR

...view details