ಕರ್ನಾಟಕ

karnataka

ETV Bharat / state

ಕೈಗಾರಿಕೆ, ಮನೆಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಚಿಂತನೆ ಇಲ್ಲ: ಸಚಿವ ಸುನೀಲ್​ ಕುಮಾರ್ - ಕೈಗಾರಿಕೆ, ಮನೆಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ

ನಮ್ಮ ರಾಜ್ಯದ ಜನರಿಗೆ ಯಾವ ಯೋಜನೆ ನೀಡಬೇಕು ಎಂಬುದನ್ನು ಸಭೆ ನಡೆಸಿ ಚರ್ಚಿಸಿದ್ದೇವೆ. ಕೇಂದ್ರದ ವಿವಿಧ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಕ್ಕೆ ಬರಬೇಕಿದೆ. ಜನಸ್ನೇಹಿ ಯೋಜನೆಗಳನ್ನು ಇಲಾಖೆ ಮೂಲಕ ತರಲಿದ್ದೇವೆ ಎಂದು ಇಂಧನ ಸಚಿವರು ಹೇಳಿದರು.

Sunilkumar
ವಿ.ಸುನೀಲ್ ಕುಮಾರ್

By

Published : Aug 25, 2021, 11:34 AM IST

ಮೈಸೂರು: ರಾಜ್ಯದ ವಿದ್ಯುತ್ ಕಂಪನಿಯನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೈಗಾರಿಕೆಗಳಿಗೆ ಹಾಗೂ ಮನೆಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಚಿಂತನೆ ಇಲ್ಲ, ಕೈಗಾರಿಕೋದ್ಯಮಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಚರ್ಚಿಸಿ ಕೈಗೊಳ್ಳುತ್ತೇವೆ ಎಂದರು.

ಮೈಸೂರಿನಲ್ಲಿ ಮಾತನಾಡಿದ ಇಂಧನ ಸಚಿವ ಸುನೀಲ್​ ಕುಮಾರ್

ರಂಗಾಯಣ ಕಲಾವಿದರಿಗೆ ಮಾಸಾಶನ ವಿಳಂಬ ವಿಚಾರವಾಗಿ ಮಾತನಾಡುತ್ತಾ, ಕೊರೊನಾ ಹಿನ್ನೆಲೆಯಲ್ಲಿ ತಡವಾಗಿದೆ. ಇದರ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಕಲಾವಿದರಿಗೆ ಸರ್ಕಾರ ಅಗತ್ಯ ನೆರವು ನೀಡಲು ಸಿದ್ದವಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಮೈಸೂರು ಪಾಲಿಕೆ: ಯಾರಾಗಲಿದ್ದಾರೆ ಹೊಸ ಮೇಯರ್?

ABOUT THE AUTHOR

...view details