ಕರ್ನಾಟಕ

karnataka

ETV Bharat / state

9 ದಿನಗಳಿಂದ ಮೈಸೂರಿನಲ್ಲಿ ಒಂದೂ ಹೊಸ ಕೊರೊನಾ ಕೇಸ್​ ಇಲ್ಲ: ಆಸ್ಪತ್ರೆಯಿಂದ ಮತ್ತೋರ್ವ ಡಿಸ್ಚಾರ್ಜ್​

ಕಳೆದ 9 ದಿನಗಳಿಂದ ಮೈಸೂರಿನಲ್ಲಿ ಒಂದೂ ಹೊಸ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಅಲ್ಲದೇ ಇಂದು ಒಬ್ಬರು ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

Dc Abhiram G. Shankar
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

By

Published : May 9, 2020, 9:00 PM IST

ಮೈಸೂರು: ಇಂದು ಜಿಲ್ಲೆಯಲ್ಲಿ ಒಂದೂ ಕೊರೊನಾ ಸೋಂಕಿತ ಕೇಸ್​ಗಳು ಪತ್ತೆಯಾಗಿಲ್ಲ. ಒಬ್ಬರು ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.

ಕೊರೊನಾ ವರದಿ
ಕಳೆದ 9 ದಿನಗಳಿಂದ ಮೈಸೂರಿನಲ್ಲಿ ಒಂದೂ ಹೊಸ ಪ್ರಕರಣ ಪತ್ತೆಯಾಗಿಲ್ಲ. ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 90 ಆಗಿದ್ದು, ಇಂದು ಮಧ್ಯಾಹ್ನ ಒಬ್ಬರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಲ್ಲಿಯವರೆಗೆ 86 ಸೋಂಕಿತರು ಗುಣಮುಖರಾಗಿದ್ದು, ಉಳಿದ 4 ಜನ ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details