ಕರ್ನಾಟಕ

karnataka

ETV Bharat / state

ಅಪ್ಪಾಜಿ ಪ್ರೀತಿಯನ್ನು ಯಾರಿಂದಲೂ ಕೊಂಡುಕೊಳ್ಳಲು ಆಗಲ್ಲ: ದರ್ಶನ್​​ - undefined

ತಂಡೆಕೆರೆಯಿಂದ ಮೂರನೇ ದಿನ ಪ್ರಚಾರ ಆರಂಭಿಸಿದ ನಟ ದರ್ಶನ್, ಅಪ್ಪಾಜಿ ಮಂಡ್ಯಕ್ಕೆ ನೀಡಿದ ಕೊಡುಗೆ ಹಾಗೂ ಪ್ರೀತಿಯನ್ನು ಯಾರಿಂದಲೂ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದರು.

ದರ್ಶನ್ ಮೈಸೂರಿನಲ್ಲಿ ಪ್ರಚಾರ

By

Published : Apr 3, 2019, 12:18 PM IST

Updated : Apr 3, 2019, 3:51 PM IST

ಮೈಸೂರು: ಮಂಡ್ಯಕ್ಕೆ ಯಾರೇ ಬಂದರೂ ಅಪ್ಪಾಜಿ ಪ್ರೀತಿಯನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನಲ್ಲಿ ಪ್ರಚಾರ ಮಾಡುವ ವೇಳೆ ಹೇಳಿದ್ದಾರೆ.

ದರ್ಶನ್ ಮೈಸೂರಿನಲ್ಲಿ ಪ್ರಚಾರ

ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ತಂಡೆಕೆರೆಯಿಂದ ಮೂರನೇ ದಿನ ಪ್ರಚಾರ ಆರಂಭಿಸಿದ ನಟ ದರ್ಶನ್, ಅಪ್ಪಾಜಿ ಮಂಡ್ಯಕ್ಕೆ ನೀಡಿದ ಕೊಡುಗೆ ಹಾಗೂ ಪ್ರೀತಿಯನ್ನು ಯಾರಿಂದಲೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಏ. 18 ರ ಮತದಾನದಂದು ಅದನ್ನು ಮತ್ತೊಮ್ಮೆ ಸಾಬೀತು ಮಾಡಿ ಎಂದು ಮನವಿ ಮಾಡಿದರು.

ಇನ್ಸ್​ಪೆಕ್ಟರ್​ ಜೊತೆ ಮಾತಿನ ಚಕಮಕಿ:

ತೆಂಡೆಕೆರೆ ಸಮೀಪ ದರ್ಶನ್ ಪ್ರಚಾರದ ವಾಹನದಲ್ಲಿದ್ದರು. ಅಭಿಮಾನಿಗಳ ಮೇಲೆ ಲಾಠಿ ಪ್ರಹಾರ ಮಾಡಬೇಡಿ ಎಂದು ಹೇಳುತ್ತಿದ್ದಂತೆ ಕೋಪಗೊಂಡ ಇನ್​​ಸ್ಪೆಕ್ಟರ್​ ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು ಅಂತ ಗೊತ್ತಿದೆ. ನಮಗೆ ಹೇಳಿಕೊಡಬೇಡಿ ಎಂದು ಗರಂ ಆದರು ಎನ್ನಲಾಗಿದೆ.

ಇನ್ನು ಅಭಿಮಾನಿಗಳು ದರ್ಶನ್ ಮುಂದೆ ಕುಣಿದು ಕುಪ್ಪಳಿಸಿ, ತೆಂಡೆಕೆರೆ ವೃತ್ತದಲ್ಲಿ 500 ಕೆಜಿ ತೂಕದ ಹೂವಿನ ಹಾರವನ್ನು ಸಾರಥಿಗೆ ಹಾಕಿದರು.

Last Updated : Apr 3, 2019, 3:51 PM IST

For All Latest Updates

TAGGED:

ABOUT THE AUTHOR

...view details