ಮೈಸೂರು:ಇತಿಹಾಸ ತಿರುಚುವಂತಹ ಕೆಲಸವನ್ನು ಯಾರು ಮಾಡಲು ಆಗುವುದಿಲ್ಲ. ಆ ಕೆಲಸಕ್ಕೆ ಯಾರೂ ಕೈ ಹಾಕಬಾರದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಇತಿಹಾಸ ತಿರುಚಲು ಯಾರಿಂದಲೂ ಸಾಧ್ಯವಿಲ್ಲ: ತನ್ವೀರ್ ಸೇಠ್ - Karnataka political development
ಇತಿಹಾಸವನ್ನು ತಿರುಚುವಂತಹ ಕೆಲಸಕ್ಕೆ ಯಾರೂ ಕೈ ಹಾಕಬಾರದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
no-one-can-distort-history
ಪಠ್ಯದಲ್ಲಿ ಟಿಪ್ಪು ಪಾಠ ತೆಗೆಯುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಸರ್ಕಾರ ಬರಲಿ ಹೋರಾಟಗಾರರ ಇತಿಹಾಸ ತಿರುಚಬಾರದು. ಟಿಪ್ಪು ಜಯಂತಿ ವಿಚಾರ ಜನರನ್ನು ದಾರಿ ತಪ್ಪಿಸುವಂತಹದು. ಇದು ಹೆಚ್ಚಿನ ದಿನ ನಿಲ್ಲುವುದಿಲ್ಲ ಎಂದು ಹೇಳಿದರು.
ಒಂದು ಕಡೆ ಜಮ್ಮು ವಿಚಾರ, ಮತ್ತೊಂದು ಕಡೆ ಇನ್ನೊಂದು ಮಾತನಾಡ್ತಾರೆ. ಇದು ಜನರನ್ನು ದಾರಿ ತಪ್ಪಿಸುವ ಆಡಳಿತ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.