ಮೈಸೂರು: ಜುಬಿಲೆಂಟ್ ಕಾರ್ಖಾನೆಗೆ ಸೋಂಕು ಹೇಗೆ ಹರಡಿತು ಎಂಬ ಬಗ್ಗೆ ಸದ್ಯಕ್ಕೆ ತನಿಖೆ ಬೇಡ. ಸೋಂಕಿತರೆಲ್ಲಾ ಗುಣಮುಖರಾದ ನಂತರ ತನಿಖೆ ಮಾಡಿದರೆ ಒಳ್ಳೆಯದು ಎಂದು ಬಗ್ಗೆ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಹರ್ಷ ಗುಪ್ತ ವಿವರಣೆ ನೀಡಿದ್ದಾರೆ.
ಜುಬಿಲೆಂಟ್ ಕಾರ್ಖಾನೆಗೆ ಸೋಂಕು ಹರಡಿದ ಬಗ್ಗೆ ಸದ್ಯಕ್ಕೆ ತನಿಖೆ ಬೇಡ: ಹರ್ಷ ಗುಪ್ತ
ಮೈಸೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ವಿಶೇಷ ಅಧಿಕಾರಿಯಾಗಿ ನೇಮಕವಾಗಿರುವ ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತ ಸರ್ಕಾರಕ್ಕೆ ಜುಬಿಲೆಂಟ್ ಕಾರ್ಖಾನೆ ಸೋಂಕಿನ ಕುರಿತು ಯಾವ ರೀತಿಯ ತನಿಖೆ ನಡೆಸಬೇಕು ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಕೋರಿದ್ದಾರೆ.
ಜುಬಿಲೆಂಟ್ ಕಾರ್ಖಾನೆಗೆ ಕೊರೊನಾ ವೈರಸ್ ಹೇಗೆ ಹರಡಿತು ಎಂಬ ಬಗ್ಗೆ ಒಂದು ವಾರದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದರು. ಈ ಪತ್ರಕ್ಕೆ ವಿವರಣೆ ನೀಡಿ ಮೇಲ್ ಮಾಡಿರುವ ಹರ್ಷಗುಪ್ತ, ಸದ್ಯ ವಿಚಾರಣೆಗಿಂತ ವೈರಸ್ ಹರಡುವಿಕೆ ತಡೆಗಟ್ಟುವುದು ಮುಖ್ಯ. ಜೊತೆಗೆ ಸೋಂಕಿತರು ಗುಣವಾಗುವುದು ಮುಖ್ಯ. ಈ ಹಂತದಲ್ಲಿ ತನಿಖೆ ನಡೆಸುವುದು ಕಷ್ಟ.
ಒಂದು ಹಂತದಲ್ಲಿ ಜುಬಿಲೆಂಟ್ ಕಾರ್ಖಾನೆಯ ತನಿಖೆ ಪೊಲೀಸ್ ವರಿಷ್ಠರ ನೇತೃತ್ವದಲ್ಲಿ ನಡೆಯುತ್ತಿದೆ. ಈ ಹಂತದಲ್ಲಿ ನಾನು ಯಾವ ರೀತಿ ತನಿಖೆ ನಡೆಸಬೇಕೆಂದು ಸ್ಪಷ್ಟನೆ ನೀಡಬೇಕೆಂದು ಹರ್ಷ ಗುಪ್ತ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.