ಮೈಸೂರು :ಲಾಕ್‌ಡೌನ್ ಪರಿಣಾಮವಾಗಿ ಕುದುರೆಗಳಿಗೆ ಮೇವು ಸಿಗದೆ ಬೀದಿಯಲ್ಲಿ ನಿದ್ರಾಣಾ ಸ್ಥಿತಿಯಲ್ಲಿ ನಿಂತಿರುವ ದೃಶ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಕಂಡು ಬರುತ್ತಿದೆ. ಸಾಂಸ್ಕೃತಿಕ ನಗರಿಯು ಟಾಂಗಾ ಗಾಡಿಗಳ ನಗರಿ ಸಹ ಆಗಿದೆ. ಆದರೆ, ಲಾಕ್‌ಡೌನ್‌ನಿಂದಾಗಿ ಟಾಂಗಾ ಗಾಡಿಯ ಜನ ಸಂಪೂರ್ಣ ಬೀದಿಗೆ ಬಿದ್ದಿದ್ದಾರೆ.
ಇಷ್ಟು ದಿನ ಎಲ್ರನ್ನೂ ಹೊತ್ಕೊಂಡು ಮೆರೆಸುತ್ತಿದ್ದೆವು.. ನಾವೀಗ ತಿನ್ನೋಕಿಲ್ಲದೇ ಅಲೆಯುತ್ತಿದ್ದೇವೆ.. - mysore Horse Latest news
ತಾವು ಸಾಕುತ್ತಿದ್ದ ಕುದುರೆಗಳಿಗೆ ಮೇವು ಸಿಗದೆ ಕುದುರೆಗಳನ್ನು ಬೀದಿಗೆ ಬಿಟ್ಟಿದ್ದಾರೆ ಟಾಂಗಾವಾಲಾಗಳು. ಇದರ ಜೊತೆಗೆ ಬಿಡಾಡಿ ಕುದುರೆಗಳಿಗೂ ಆಹಾರವಿಲ್ಲದೆ ರಸ್ತೆ ಮಧ್ಯದಲ್ಲೇ ನಿಂತಿವೆ. ಈ ದೃಶ್ಯ ಮನಕಲಕುವಂತಿದೆ.
ಮೇವು ಸಿಗದೆ ಕುದುರೆಗಳ ಪರಾದಾಟ
ತಾವು ಸಾಕುತ್ತಿದ್ದ ಕುದುರೆಗಳಿಗೆ ಮೇವು ಸಿಗದೆ ಕುದುರೆಗಳನ್ನು ಬೀದಿಗೆ ಬಿಟ್ಟಿದ್ದಾರೆ. ಇದರ ಜೊತೆಗೆ ಬಿಡಾಡಿ ಕುದುರೆಗಳಿಗೂ ಮೇವು ಸಿಗದೆ ರಸ್ತೆ ಮಧ್ಯದಲ್ಲೇ ನಿಂತಿವೆ. ಈ ದೃಶ್ಯ ಮನಕಲಕುವಂತಿದೆ.