ಕರ್ನಾಟಕ

karnataka

ETV Bharat / state

ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೈಸೂರು ವಿವಿಯಿಂದ ಸಿಹಿ ಸುದ್ದಿ!

ಮೈಸೂರು ವಿವಿಯ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು 2 ಮತ್ತು 4ನೇ ಸೆಮಿಸ್ಟರ್​ಗೆ ಪರೀಕ್ಷೆ ಇಲ್ಲದೆ ಪಾಸ್ ಆಗಿದ್ದಾರೆ.

ಮೈಸೂರು ವಿವಿ
ಮೈಸೂರು ವಿವಿ

By

Published : Dec 3, 2020, 4:15 PM IST

ಮೈಸೂರು: ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡುವ ಮೂಲಕ ವಿದ್ಯಾರ್ಥಿಗಳ ಆತಂಕವನ್ನು ಮೈಸೂರು ವಿಶ್ವವಿದ್ಯಾನಿಲಯ ದೂರ ಮಾಡಿದೆ. ಬಾಕಿ ಉಳಿದಿದ್ದ ವಿಷಯಗಳ ಪರೀಕ್ಷೆ ಬರೆಯದೇ ಮುಂದಿನ ಸೆಮಿಸ್ಟರ್​ಗೆ ವಿದ್ಯಾರ್ಥಿಗಳು ಜಿಗಿದಿದ್ದಾರೆ. 2 ಮತ್ತು 4ನೇ ಸೆಮಿಸ್ಟರ್​ಗೆ ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳು ಪಾಸ್ ಆಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ.

ಕಳೆದ ಸೆಮಿಸ್ಟರ್​ಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಲಾಗಿದೆ. ಸದ್ಯ ಫೇಲ್​ ಆಗಿರುವ ವಿದ್ಯಾರ್ಥಿಗಳ ಫಲಿತಾಂಶಕ್ಕೆ ತಡೆ ನೀಡಲಾಗಿದೆ‌. ಈ ಮೂಲಕ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್​ಗಳಲ್ಲಿ ವಿಷಯಗಳು ಬಾಕಿಯಿದ್ದರೂ ತಲೆಕೆಡಿಸಿಕೊಳ್ಳಬೇಕಿಲ್ಲ.

ಓದಿ:10 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ಮೈಸೂರು ವಿಶ್ವವಿದ್ಯಾನಿಲಯ

ಯುಜಿಸಿ ಗೈಡ್​ಲೈನ್​ ಪ್ರಕಾರ, ಯುಜಿ, ಪಿಜಿ ಎಕ್ಸಾಂ ಮುಗಿಸಲಾಗಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗಷ್ಟೇ ಪರೀಕ್ಷೆ ಮಾಡಲಾಗಿದೆ. ಸರ್ಕಾರದ ಅನುಮತಿ ಮತ್ತು ವಿವಿ ತಜ್ಞರ ಸಲಹೆ ಸೂಚನೆಗಳಂತೆ 1 ಮತ್ತು 3ನೇ ಸೆಮಿಸ್ಟರ್​ನಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ 2 ಮತ್ತು 4 ನೇ ಸೆಮಿಸ್ಟರ್ ಪಾಸ್ ಮಾಡಲಾಗಿದೆ.

ಈ ಅಂಕಪಟ್ಟಿಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಿಲ್ಲ. ಪರೀಕ್ಷೆ ಬರೆದು ಪಾಸ್ ಆದ ರೀತಿಯಲ್ಲೇ ಅಂಕ ಪಟ್ಟಿ ಇರಲಿದೆ. ಕಾರಣ ಸ್ಕಾಲರ್​ಶಿಪ್ ಪಡೆಯಲು ನವೆಂಬರ್ 20 ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ವಿವಿ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ದಿನಾಂಕ ಮುಗಿಯುವ ಅವಧಿಯೊಳಗೆ ಅಂಕಪಟ್ಟಿ ವಿತರಿಸಲಾಗಿದೆ.

ಕೊರೊನಾದಿಂದ ಕೆಲ ವಿದ್ಯಾರ್ಥಿಗಳು ಪರೀಕ್ಷೆಗೆ ಆಗಮಿಸಿರಲಿಲ್ಲ. ಅಂತವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ 113 ಅರ್ಜಿಗಳು ಬಂದಿವೆ‌. ಅಷ್ಟೇ ಅಲ್ಲದೆ ವೇಳಾಪಟ್ಟಿ ರೆಡಿಯಾಗಿದೆ. ಪರೀಕ್ಷೆ ಮುಗಿದ ಮುರ್ನಾಲ್ಕು ದಿನಗಳಲ್ಲಿ ಮೌಲ್ಯಮಾಪನ ಮುಗಿಸಿ ಫಲಿತಾಂಶ ನೀಡುವ ಮೂಲಕ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ.ಮಹದೇವನ್ ಮಾಹಿತಿ‌ ನೀಡಿದರು.

ABOUT THE AUTHOR

...view details