ಕರ್ನಾಟಕ

karnataka

ETV Bharat / state

ಕೆ‌ಆರ್​​ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಬೇಡ.. ರಾಜ್ಯ ಸರ್ಕಾರಕ್ಕೆ ಎಂ.ಲಕ್ಷ್ಮಣ್ ಎಚ್ಚರಿಕೆ - ಕೆಆರ್​​ಎಸ್ ಹಿಂಭಾಗದಲ್ಲಿ ಡಿಸ್ನಿಲ್ಯಾಂಡ್ ಯೋಜನೆ

ಈ ಯೋಜನೆಗೆ ಸರ್ಕಾರದ 331 ಎಕರೆ ಸರ್ಕಾರಿ ಜಮೀನು ಹಾಗೂ ರೈತರಿಂದ 400 ಎಕರೆ ಭೂಮಿಯನ್ನು ಸ್ವಾಧೀನ ಪಡೆಸಿಕೊಂಡು ಈ ಯೋಜನೆ ಮಾಡಲು ಹೊರಟಿದೆ..

no-disneyland-in-krs-dam-laxman-warns-in-mysuru
ಸರ್ಕಾರಕ್ಕೆ ಎಮ್.ಲಕ್ಷ್ಮಣ್ ಎಚ್ಚರಿಕೆ

By

Published : Mar 13, 2021, 4:51 PM IST

ಮೈಸೂರು :ಕೆಆರ್​​ಎಸ್ ಹಿಂಭಾಗದಲ್ಲಿ ಡಿಸ್ನಿಲ್ಯಾಂಡ್ ಯೋಜನೆ ಬೇಡ. ಈ ಯೋಜನೆಯನ್ನು ಜಾರಿಗೆ ತರಲು ಹೋದರೆ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರ್ ಸಂಸ್ಥೆ ಕಾನೂನು ಮೊರೆ ಹೋಗುತ್ತದೆ ಎಂದು ಸಂಸ್ಥೆ ಸಂಚಾಲಕ ಎಂ.ಲಕ್ಷ್ಮಣ್ ಸರ್ಕಾರಕ್ಕೆ ಎಚ್ಚರಿಸಿದರು.

ಈಟಿವಿ ಭಾರತಗೆ ಎಂ. ಲಕ್ಷ್ಮಣ್‌ ಹೇಳಿದ್ದಿಷ್ಟು..

ಓದಿ: ವಿಜಯ್ ಹಜಾರೆ ಟ್ರೋಫಿ ಫೈನಲ್​​‌: ಬಲಿಷ್ಠ ಮುಂಬೈ ಎದರಿಸಲು ಯುಪಿ ರಣತಂತ್ರ

ಇನ್ಸ್‌ಟಿಟ್ಯೂಟ್‌ ಆಫ್‌ ಇಂಜಿನಿಯರಿಂಗ್​​ನ ಸಂಚಾಲಕ ಎಂ.ಲಕ್ಷ್ಮಣ್ ಮಾತನಾಡಿ, ಈ ಯೋಜನೆಗೆ 2 ಸಾವಿರ ಕೋಟಿ ಪ್ರಾಜೆಕ್ಟ್ ತಯಾರಿಸಲಾಗಿದೆ. 5 ಖಾಸಗಿ ಕಂಪನಿಗಳಿಗೆ ನೀಡಲು ತಿರ್ಮಾನಿಸಲಾಗಿದೆ.

ಈ ಯೋಜನೆಗೆ ಸರ್ಕಾರದ 331 ಎಕರೆ ಸರ್ಕಾರಿ ಜಮೀನು ಹಾಗೂ ರೈತರಿಂದ 400 ಎಕರೆ ಭೂಮಿಯನ್ನು ಸ್ವಾಧೀನ ಪಡೆಸಿಕೊಂಡು ಈ ಯೋಜನೆ ಮಾಡಲು ಹೊರಟಿದೆ.

ಆದರೆ, ಈ ಯೋಜನೆ ಮಾಡಿದರೆ ಕೆಆರ್​​ಎಸ್ ಡ್ಯಾಮ್‌ಗೆ ಅಪಾಯವಾಗುತ್ತದೆ. ಆದ್ದರಿಂದ ಈ ಯೋಜನೆಯನ್ನು ನದಿ ಪಾತ್ರದಲ್ಲಿ ಮಾಡಿದರೆ ಒಳ್ಳೆಯದು, ಅದನ್ನು ಬಿಟ್ಟು ಡ್ಯಾಮ್ ಹಿಂಭಾಗದಲ್ಲಿ ಮಾಡಿದರೆ ಅಪಾಯ. ಇಷ್ಟರ ಮೇಲೂ ಡಿಸ್ನಿ ಲ್ಯಾಂಡ್‌ ಯೋಜನೆ ಕೈಗೆತ್ತಿಕೊಂಡ್ರೇ, ಈ ಬಗ್ಗೆ ಕೋರ್ಟ್ ಮೊರೆ ಹೋಗುವುದಾಗಿ ಎಂ.ಲಕ್ಷ್ಮಣ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ABOUT THE AUTHOR

...view details