ಕರ್ನಾಟಕ

karnataka

ETV Bharat / state

ಚಂದ್ರ ಗ್ರಹಣ : ಮಂಗಳವಾರ ಚಾಮುಂಡೇಶ್ವರಿ ತಾಯಿ ದರ್ಶನವಿಲ್ಲ

ಚಂದ್ರಗ್ರಹಣ ಹಿನ್ನೆಲೆ ನ.8ರಂದು ಮಧ್ಯಾಹ್ನ 1ಗಂಟೆಯಿಂದ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶ ಇಲ್ಲ ಎಂದು ದೇವಸ್ಥಾನದ ನಿರ್ವಹಣಾಧಿಕಾರಿಗಳು ಹೇಳಿದ್ದಾರೆ.

no-darshan-of-chamundi-on-nov-8-from-1-pm
ಚಂದ್ರ ಗ್ರಹಣ : ಮಂಗಳವಾರ ಚಾಮುಂಡೇಶ್ವರಿ ತಾಯಿ ದರ್ಶನವಿಲ್ಲ

By

Published : Nov 5, 2022, 7:40 PM IST

ಮೈಸೂರು: ಚಂದ್ರಗ್ರಹಣದ ಹಿನ್ನೆಲೆ ನವೆಂಬರ್ 8ರ ಮಂಗಳವಾರದಂದು ಮಧ್ಯಾಹ್ನ 1 ಗಂಟೆಯಿಂದ ಚಾಮುಂಡೇಶ್ವರಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಚಾಮುಂಡಿ ಬೆಟ್ಟದ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಂದ್ರ ಗ್ರಹಣ : ಮಂಗಳವಾರ ಚಾಮುಂಡೇಶ್ವರಿ ತಾಯಿ ದರ್ಶನವಿಲ್ಲ

ರಾಹುಗ್ರಸ್ತ ಗ್ರಸ್ತೋದಯ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಮಧ್ಯಾಹ್ನ 1 ಗಂಟೆಯಿಂದ ತಾಯಿಯ ದರ್ಶನ ಇಲ್ಲ. ಚಂದ್ರ ಗ್ರಹಣದ ಸ್ಪರ್ಶ ಕಾಲ ಹಾಗೂ ಮೋಕ್ಷ ಕಾಲಗಳಲ್ಲಿ ವಿಶೇಷ ಪೂಜೆಗಳು ನಡೆಯಲಿದೆ. ಚಂದ್ರ ಗ್ರಹಣದ ನಂತರ ದೇವಾಲಯದ ಗರ್ಭ ಗುಡಿಯ ಸ್ವಚ್ಛತೆ, ಗ್ರಹಣದ ನಂತರ ನಡೆಯುವ ಅಭಿಷೇಕ ಮತ್ತು ಮಹಾ ಮಂಗಳಾರತಿ ಹಿನ್ನೆಲೆಯಲ್ಲಿ ಭಕ್ತರ ಭೇಟಿಯನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ :ಒಂದೇ ತಿಂಗಳಲ್ಲಿ ನಂಜುಂಡೇಶ್ವರನಿಗೆ 1.52 ಕೋಟಿ ರೂ. ಕಾಣಿಕೆ

ABOUT THE AUTHOR

...view details