ಮೈಸೂರು: ಇಂದು ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿಲ್ಲ. ಸತತ ಆರನೇ ದಿನವೂ ಕೊರೊನಾ ಶೂನ್ಯ ಸುತ್ತಿದೆ.
ಮೈಸೂರಿನಲ್ಲಿ 6 ದಿನವೂ ಶೂನ್ಯ ಸುತ್ತಿದ ಕೊರೊನಾ: ಮತ್ತೋರ್ವ ಡಿಸ್ಚಾರ್ಜ್ - No Corona case in Mysore
ಮೈಸೂರಿನಲ್ಲಿ ಕಳೆದ 6 ದಿನಗಳಿಂದ ಯಾವುದೇ ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿಲ್ಲ. ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 92.
ಮೈಸೂರಿನಲ್ಲಿ ದಾಖಲಾಗದ ಕೊರೊನಾ ಕೇಸ್
ಒಬ್ಬರು ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಮೈಸೂರಿನಲ್ಲಿ ಕಳೆದ 6 ದಿನಗಳಿಂದ ಯಾವುದೇ ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿಲ್ಲ. ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 92.
ಇಂದು ಸಂಜೆ ಒಬ್ಬರು ಪಿ-1510 ವ್ಯಕ್ತಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿಯವರೆಗೆ 91 ಜನ ಸೋಂಕಿತರು ಗುಣಮುಖರಾಗಿದ್ದು, ಉಳಿದ ಒಬ್ಬರು ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.