ಮೈಸೂರು: ನಗರದಲ್ಲಿ ಹಕ್ಕಿಜ್ವರ ಇಲ್ಲ. ಆದ್ದರಿಂದ ಇನ್ಮುಂದೆ ವಾರದಲ್ಲಿ 3 ದಿನ ಕೋಳಿ ಮಾಂಸ ಮಾರಾಟ ಮಾಡಬಹುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಮೈಸೂರಲ್ಲಿ ಹಕ್ಕಿಜ್ವರ ಇಲ್ಲ: ಕೋಳಿ ಮಾಂಸ ಮಾರಾಟಕ್ಕೆ ಗ್ರೀನ್ ಸಿಗ್ನಲ್ - ಮೈಸೂರಲ್ಲಿ ಹಕ್ಕಿಜ್ವರ ಭೀತಿ
ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿಯ ನಡುವೆ ಹಲವೆಡೆ ಹಕ್ಕಿಜ್ವರದ ಭೀತಿಯೂ ಎದುರಾಗಿತ್ತು. ಇದಕ್ಕೆ ಸಂಬಂಧಿಸಿದ್ದಂತೆ ಮೈಸೂರಿನಲ್ಲೂ ಹಕ್ಕಿಗಳು ಈ ಮೊದಲು ಅನುಮಾನಾಸ್ಪದವಾಗಿ ಸಾವನಪ್ಪಿದ್ದವು. ನಗರದ ಕುಂಬಾರಕೊಪ್ಪಲಿನಲ್ಲಿ ಹಕ್ಕಿಜ್ವರ ಹಿನ್ನೆಲೆಯಲ್ಲಿ ಕೋಳಿ ಮಾಂಸ ಮಾರಾಟ ರದ್ದುಗೊಳಿಸಲಾಗಿತ್ತು.
ಮೈಸೂರಲ್ಲಿ ಹಕ್ಕಿಜ್ವರ ಇಲ್ಲ: ಕೋಳಿಮಾಂಸ ಮಾರಾಟಕ್ಕೆ ಗ್ರೀನ್ ಸಿಗ್ನಲ್
ನಗರದ ಕುಂಬಾರಕೊಪ್ಪಲಿನಲ್ಲಿ ಹಕ್ಕಿಜ್ವರ ಹಿನ್ನೆಲೆಯಲ್ಲಿ ಕೋಳಿ ಮಾಂಸ ಮಾರಾಟ ರದ್ದುಗೊಳಿಸಲಾಗಿತ್ತು. ಆದರೆ ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ ಪರಿಶೀಲನೆ ನಡೆಸಿ, ಯಾವುದೇ ಹಕ್ಕಿಗಳು ಸಾವನ್ನಪ್ಪಿಲ್ಲ. ಹಕ್ಕಿಜ್ವರ ಸಂಪೂರ್ಣ ಗುಣಮುಖವಾಗಿದೆ ಎಂದು ವರದಿ ನೀಡಿತ್ತು.
ಈ ವರದಿ ಅನ್ವಯ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಗುರುದತ್ ಹೆಗ್ಡೆ ವಾರದ ಮಂಗಳವಾರ, ಶುಕ್ರವಾರ, ಭಾನುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕೋಳಿ ಮಾಂಸ ಮಾರಟ ಮಾಡಲು ಅನುಮತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.