ಕರ್ನಾಟಕ

karnataka

ETV Bharat / state

ಕೆಆರ್ ಆಸ್ಪತ್ರೆಯಲ್ಲಿ ನೋ ಬೆಡ್ಸ್, ನೋ ವೆಂಟಿಲೇಟರ್ : ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವ ಜನ - No Beds, No Ventilator at KR Hospital in Mysore

ಯಾರೂ ಕೂಡ ಅಡ್ಮಿಟ್ ಮಾಡಿಕೊಳ್ಳತಿಲ್ಲ. ಪುಣ್ಯಾತ್ಮರು ಇಲ್ಲಿ ಬೆಡ್ ಕೊಡ್ತೀವಿ ಅಂದಿದ್ದಾರೆ ಸರ್, ಅದಕ್ಕೆ ಮಧ್ಯರಾತ್ರಿಯಿಂದ ಕಾಯ್ತಿದ್ದೀವಿ ಎಂದು ರೋಗಿಗಳ ಸಂಬಂಧಿಗಳು ಅಳಲನ್ನು ತೋಡಿಕೊಂಡಿದ್ದಾರೆ..

no-beds-no-ventilator-at-kr-hospital-in-mysore
ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವ ಜನ

By

Published : May 7, 2021, 4:21 PM IST

ಮೈಸೂರು : ನೋ ಬೆಡ್ಸ್ ಅವೆಲೆಬಲ್​, ನೋ‌ ವೆಂಟಿಲೇಟರ್‌ ಬೆಡ್ಸ್ ಅವೆಲೆಬಲ್ ಎಂದು ಕೆ‌. ಆರ್. ಆಸ್ಪತ್ರೆ ಮುಂಭಾಗ ಬೋಡ್೯ ಹಾಕಿರುವುದರಿಂದ ಪೋಷಕರನ್ನ ಉಳಿಸಿಕೊಳ್ಳಲು ಮಕ್ಕಳು ಪರದಾಡುವ ಸ್ಥಿತಿ ಉಂಟಾಗಿದೆ.

ಕೆ. ಆರ್. ಆಸ್ಪತ್ರೆ ಕೋವಿಡ್ ಕೇರ್‌ನಲ್ಲಿ ಎಲ್ಲ 600 ಬೆಡ್ ಭರ್ತಿಯಾಗಿರುವುದರಿಂದ, ಆಸ್ಪತ್ರೆ ಮುಂದೆ ಬೆಡ್‌ಗೆ ಜನ ಕಾಯುವಂತಹ ಸಂಕಷ್ಟ ಎದುರಾಗಿದೆ. ಎರಡೆರಡು ಆ್ಯಂಬುಲೆನ್ಸ್ ಬದಲಾಯಿಸಿದ್ದೇವೆ. ಇಡೀ ಮೈಸೂರು ಸುತ್ತಿದ್ರೂ ಬೆಡ್ ಸಿಗುತ್ತಿಲ್ಲ.

ಯಾರೂ ಕೂಡ ಅಡ್ಮಿಟ್ ಮಾಡಿಕೊಳ್ಳತಿಲ್ಲ. ಪುಣ್ಯಾತ್ಮರು ಇಲ್ಲಿ ಬೆಡ್ ಕೊಡ್ತೀವಿ ಅಂದಿದ್ದಾರೆ ಸರ್, ಅದಕ್ಕೆ ಮಧ್ಯರಾತ್ರಿಯಿಂದ ಕಾಯ್ತಿದ್ದೀವಿ ಎಂದು ರೋಗಿಗಳ ಸಂಬಂಧಿಗಳು ಅಳಲನ್ನು ತೋಡಿಕೊಂಡಿದ್ದಾರೆ.

ಕೆ ಆರ್ ಆಸ್ಪತ್ರೆಯಲ್ಲಿ ಬೆಡ್​ ಅಭಾವದ ಕುರಿತು ರೋಗಿಗಳ ಸಂಬಂಧಿಕರು ಮಾತನಾಡಿದ್ದಾರೆ..

ತಂದೆ ಪ್ರಾಣ ಉಳಿಸಿಕೊಳ್ಳಲು ಮಗನ ಹರಸಾಹಸ, ತಾಯಿ ಕಾಪಾಡಿಕೊಳ್ಳಲು ಆ್ಯಂಬುಲೆನ್ಸ್ ಮುಂದೆಯೇ ಠಿಕಾಣಿ ಹೂಡಿದ ಮಗ. ಪೋಷಕರನ್ನು ಕಾಪಾಡಿಕೊಳ್ಳಲು ಆಸ್ಪತ್ರೆ ಮುಂದೆ ಮಕ್ಕಳು ಕಾರುಗಳಲ್ಲಿ, ಆ್ಯಂಬುಲೆನ್ಸ್‌ಗಳಲ್ಲಿ ಚಿಕಿತ್ಸೆ ಕೊಡಿಸುತ್ತಿರುವ ದೃಶ್ಯ ನೋಡಿದರೆ ಮೈಸೂರು ಎತ್ತ ಸಾಗುತ್ತಿದೆ ಎಂಬ ಆತಂಕ ಎದುರಾಗಿದೆ ಅಂತ ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ.

ಓದಿ:ಬೆಡ್ ಬ್ಲಾಕಿಂಗ್.. ವಿಚಾರಣೆ ತೀವ್ರವಾಗ್ತಿದ್ದಂತೆಯೇ ಶಾಸಕ ಸತೀಶ್ ರೆಡ್ಡಿ ಆಪ್ತನಿಗೆ ಹೆಚ್ಚಾಯ್ತು ಬಿಪಿ, ಆಸ್ಪತ್ರೆಗೆ ದಾಖಲು!

ABOUT THE AUTHOR

...view details