ಕರ್ನಾಟಕ

karnataka

ETV Bharat / state

ಮುಂದಿನ ಸಲ ನಾವೇ ಅಧಿಕಾರಕ್ಕೆ ಬರ್ತೀವಿ, ಆಗ 10 ಕೆಜಿ ಅಕ್ಕಿ ಕೊಡ್ತೀವಿ: ಸಿದ್ದರಾಮಯ್ಯ ಭರವಸೆ - ಅನ್ನಭಾಗ್ಯದಲ್ಲಿ 10 ಕೆಜಿ ಅಕ್ಕಿ

ನನ್ನ ಎಲ್ಲ ಯೋಜನೆಗಳನ್ನ ಈಗಿನ ಸರ್ಕಾರ ನಿಲ್ಲಿಸುತ್ತಿದ್ದಾರೆ. ಅನ್ನಭಾಗ್ಯಕ್ಕೂ ಕತ್ತರಿ ಹಾಕಿದ್ದಾರೆ. 7ಕೆಜಿ ಅಕ್ಕಿಯನ್ನ ಪ್ರತಿಯೊಬ್ಬರಿಗೆ ಉಚಿತವಾಗಿ ಕೊಡ್ತಿದ್ದೆ. ನೂರಕ್ಕೆ ನೂರರಷ್ಟು ನಾವು ಅಧಿಕಾರಕ್ಕೆ ಬರ್ತಿವಿ. ಅಧಿಕಾರಕ್ಕೆ ಬಂದಮೇಲೆ 10 ಕೆ.ಜಿ.ಅಕ್ಕಿ ಕೊಡ್ತೀವಿ ಎಂದು ಮಾಜಿ ಸಿಎಂ ಭರವಸೆ ನೀಡಿದರು.

ಸಿದ್ದರಾಮಯ್ಯ
ಸಿದ್ದರಾಮಯ್ಯ

By

Published : Feb 20, 2021, 1:06 AM IST

ಮೈಸೂರು:ಆಪರೇಷನ್ ಕಮಲ ಹುಟ್ಟುಹಾಕಿದ ಜನಕ ಅಂದ್ರೆ ಅದು ಮಿಸ್ಟರ್ ಯಡಿಯೂರಪ್ಪ. ನೀವು ಒಬ್ಬ ಅನೈತಿಕ ಸರ್ಕಾರದ ಮುಖ್ಯಮಂತ್ರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಹುಣಸೂರು ತಾಲೂಕಿನ ಶಾಸಕ ಮಂಜುನಾಥ್ ಅವರ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಕೋಟ್ಯಂತರ ರೂ. ಕೊಟ್ಟು ಖರೀದಿ ಮಾಡಿ ಸರ್ಕಾರ ರಚನೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಆಪರೇಷನ್ ಕಮಲ ಎನ್ನುವ ಪದವನ್ನೇ ಕೇಳಿರಲಿಲ್ಲ, 2008ರಲ್ಲಿ ಯಡಿಯೂರಪ್ಪ ಕೋಟಿ ಕೋಟಿ ಕೊಟ್ಟು ಆಪರೇಷನ್ ಕಮಲ ಮಾಡೋಕೆ ಶುರು ಮಾಡಿದ್ರು. ಸಂತೇಲಿ ಕುರಿ, ಮೇಕೆ ವ್ಯಾಪಾರ ಆಗೋದನ್ನ ನೋಡಿದ್ದೇವು, ಆದರೆ ನಮ್ಮ ರಾಜ್ಯದಲ್ಲಿ ಶಾಸಕರ ಮಾರಾಟವಾಗಿದ್ದಾರೆ. ಇಂತವರು ರಾಜಕಾರಣದಲ್ಲಿ ಇರಬಾರದು. ಇಂತವರಿಗೆ ಮತ್ತೆ ಮಣೆ ಹಾಕಬಾರದು.ಇದೊಂದು ಅನೈತಿಕ, ರೋಗಗ್ರಸ್ತ ಸರ್ಕಾರ ಎಂದು ಜರಿದರು.

ಹುಣಸೂರು ತಾಲೂಕಿನ ಶಾಸಕ ಮಂಜುನಾಥ್ ಅವರ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ

ನನ್ನ ಎಲ್ಲ ಯೋಜನೆಗಳನ್ನ ಈಗಿನ ಸರ್ಕಾರ ನಿಲ್ಲಿಸುತ್ತಿದ್ದಾರೆ. ಅನ್ನಭಾಗ್ಯಕ್ಕೂ ಕತ್ತರಿ ಹಾಕಿದ್ದಾರೆ. 7ಕೆಜಿ ಅಕ್ಕಿಯನ್ನ ಪ್ರತಿಯೊಬ್ಬರಿಗೆ ಉಚಿತವಾಗಿ ಕೊಡ್ತಿದ್ದೆ. ನೂರಕ್ಕೆ ನೂರರಷ್ಟು ನಾವು ಅಧಿಕಾರಕ್ಕೆ ಬರ್ತಿವಿ ಅಧಿಕಾರಕ್ಕೆ ಬಂದಮೇಲೆ 10 ಕೆ.ಜಿ.ಅಕ್ಕಿ ಕೊಡ್ತೀವಿ ಎಂದು ಭರವಸೆ ನೀಡಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಎಷ್ಟೇ ತಿಪ್ಪರಲಾಗ ಹಾಕಿದ್ರು, ಜೆಡಿಎಸ್​ನವರು ಎಷ್ಟೇ ಸುಳ್ಳು ಹೇಳಿದ್ರು, ನಾವೇ ಅಧಿಕಾರಕ್ಕೆ ಬರೋದು ಎಂದರು.

ನನ್ನ ಸರ್ಕಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಟೆಕ್ ಆಪ್ ಆಗಲ್ಲ ಅಂತಿದ್ರು. ಆದ್ರೆ, ಈಗಿನ ಸರ್ಕಾರ ಡಕೋಟ ಸರ್ಕಾರ. ಯಡಿಯೂರಪ್ಪ ಬಸ್ ಡಕೋಟ. ಡ್ರೈವಿಂಗ್ ಬಾರದ ಯಡಿಯೂರಪ್ಪಗೆ ಡಕೋಟ ಬಸ್ ಕೊಟ್ಟಿದ್ದಾರೆ. ಮುಂದಕ್ಕೆ ಹೋಗೋದಿಲ್ಲ ಯಡಿಯೂರಪ್ಪನ ಬಸ್ ಎಂದು ವ್ಯಂಗ್ಯವಾಡಿದರು.

ಹುಣಸೂರು ತಾಲೂಕಿನ ಶಾಸಕ ಮಂಜುನಾಥ್ ಅವರ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ

ರಾಮಮಂದಿರ ಕಟ್ಟಲು ವಿರೋಧವಿಲ್ಲ:

ಹಿಂದೆ ರಾಮಮಂದಿರ ಕಟ್ಟೋಕೆ ಒಂದೂವರೆ ಸಾವಿರ ಕೋಟಿ ರೂ.ಸಂಗ್ರಹಿಸಿದ್ದಾರೆ. ಲೆಕ್ಕಕೊಡಲಿ, ಹಿಂದೆ ಸಂಗ್ರಹಿಸಿದ ಬಗ್ಗೆ ಲೆಕ್ಕಕೊಡಲಿ. ರಾಮಮಂದಿರ ಕಟ್ಟೋಕೆ ನಮ್ಮದೇನು ಅಭ್ಯಂತರವಿಲ್ಲ. ರಾಮನ ವಿರೋಧಿಗಳು ನಾವಲ್ಲ. ರಾಮನ ಬಗ್ಗೆ ಅಪಾರ ಗೌರವವಿದೆ. ನಾವ್ಯಾರು ವಿರೋಧಿಗಳಲ್ಲ. ಹಿಂದುತ್ವ ಅಂದ್ರೆ ,ನೀವು ಸವರ್ಕಾರ್ ಹಿಂದೂ ಎಂದು ಹೇಳ್ತೀರ, ನಾವು ಗಾಂಧೀಜಿ ಹಿಂದುತ್ವ ಎಂದು ಹೇಳ್ತೀವಿ. ಮಾನವೀಯ ಧರ್ಮ ನೋಡಬೇಕು ಎಂದು ಹೇಳಿದರು.

ABOUT THE AUTHOR

...view details