ಕರ್ನಾಟಕ

karnataka

ETV Bharat / state

ಮೈಸೂರಲ್ಲಿ ಮತ್ತೆ 7 ಮಂದಿಗೆ ಸೋಂಕು, ಬೆಂಗಳೂರಿಗೆ ಸೈಡ್​ ಹೊಡೆಯುತ್ತಾ ಸಾಂಸ್ಕೃತಿಕ ನಗರಿ?

ಕೊರೊನಾ ಮುಂಜಾಗ್ರತೆಯ ನಡುವೆಯೂ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ಏಳು ಮಂದಿಯಲ್ಲಿ ಕೊರೊನಾ ವೈರಸ್​ ಕಾಣಿಸಿಕೊಂಡಿದ್ದು, ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ಇದೀಗ 35ಕ್ಕೆ ಏರಿದೆ.

corona
ಕೊರೊನಾ

By

Published : Apr 6, 2020, 3:25 PM IST

ಮೈಸೂರು:ಮೈಸೂರಿನಲ್ಲಿ ಮತ್ತೇ 7 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸಾಂಸ್ಕೃತಿಕ ನಗರಿಯಲ್ಲಿ ಸೋಂಕಿತರ ಸಂಖ್ಯೆ 35ಕ್ಕೇರಿ ಬೆಂಗಳೂರನ್ನು ಮೀರಿಸುವ ಹಂತಕ್ಕೆ ಬಂದು ತಲುಪುತ್ತಿದೆ.

ಪ್ರಯಾಣ ಮಾಹಿತಿ

37 ವರ್ಷದ, 57 ವರ್ಷದ, 22 ವರ್ಷ ಈ ಮೂವರು ಪುರುಷರು ದೆಹಲಿಯಲ್ಲಿ ಪ್ರಯಾಣಿಸಿದ ಇತಿಹಾಸ ಹೊಂದಿದ್ದಾರೆ. 20 ವರ್ಷ ಯುವಕನಿಗೆ ಕಾಣಿಸಿಕೊಂಡಿದ್ದ ಈತ ರೋಗಿ ಸಂಖ್ಯೆ 104ರ ಸಹೋದರನಾಗಿದ್ದಾನೆ. 39ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಈಕೆ ಜುಲಿಬಿಯಂಟ್ ನೌಕರರಾಗಿದ್ದಾರೆ. 35 ವರ್ಷ ವ್ಯಕ್ತಿ ದುಬೈ ಪ್ರವಾಸದಿಂದ ವಾಪಸ್ ಆಗಿದ್ದಾರೆ. ಒಟ್ಟಾರೆ ಮೈಸೂರಿನಲ್ಲಿ 35 ಮಂದಿ ಸೋಂಕಿತರಾಗಿರುವುದರಿಂದ ಇಲ್ಲಿನ ಜನತೆ ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.

ABOUT THE AUTHOR

...view details