ಮೈಸೂರು: ಶರನ್ನವರಾತ್ರಿಯ 7ನೇ ದಿನವಾದ ನಿನ್ನೆ ರಾಕ್ಷಸರನ್ನು ಸಂಹಾರ ಮಾಡಿದ ದಿನ. ಹಾಗಾಗಿ ಚಾಮುಂಡೇಶ್ವರಿಗೆ ಕಾಳಿಯ ಅಲಂಕಾರ ಮಾಡಲಾಗಿತ್ತು.
ನಾಡ ಅಧಿದೇವತೆ ಚಾಮುಂಡೇಶ್ವರಿಯ ಮೂಲ ಮೂರ್ತಿ ಹಾಗೂ ಉತ್ಸವ ಮೂರ್ತಿಗೆ ಕಾಳಿಯ ಅಲಂಕಾರ ಮಾಡಲಾಗಿದ್ದು, ವರ್ಷದಲ್ಲಿ ನವರಾತ್ರಿ ಸಂದರ್ಭದಲ್ಲಿ 7ನೇ ದಿನ ಕಾಳರಾತ್ರಿ ಪೂಜೆಯ ದಿನದಂದು ಮಾತ್ರ ಈ ಅಲಂಕಾರ ಮಾಡಲಾಗುತ್ತದೆ. ಈ ಕಾಳರಾತ್ರಿ ಪೂಜೆಯಂದು ಚಾಮುಂಡಿ ತಾಯಿಯ ಕಾಳಿ ಅಲಂಕಾರ ನೋಡಲು ಚಾಮುಂಡಿ ಬೆಟ್ಟಕ್ಕೆ ಭಕ್ತಸಾಗರವೇ ಕೋವಿಡ್ಅನ್ನು ನಿರ್ಲಕ್ಷ್ಯಿಸಿ ಬಂದಿದ್ದು, ಈ ಜನಸಾಗರವನ್ನು ನಿಯಂತ್ರಿಸಲು ಪೋಲಿಸರು ಹರಸಾಹಸ ಪಟ್ಟರು.