ಕರ್ನಾಟಕ

karnataka

ETV Bharat / state

ಕಲಾವಿದನ ಕೈಚಳಕದಲ್ಲಿ ಗಣೇಶನೊಂದಿಗೆ ಮೂಡಿ ಬಂದ ಗಣ್ಯರು

ಮೈಸೂರಿನಲ್ಲಿ ಗಣೇಶನೊಂದಿಗೆ ರಾಷ್ಟ್ರ ನಾಯಕರು, ಗಣ್ಯರು ಕಲಾವಿದನ ಕೈಚಳಕದಲ್ಲಿ ಮೂಡಿಬಂದಿದ್ದಾರೆ.

ರಾಷ್ಟ್ರ ನಾಯಕರು

By

Published : Sep 1, 2019, 7:28 AM IST

Updated : Sep 1, 2019, 11:34 AM IST

ಮೈಸೂರು:ಗಣೇಶನೊಂದಿಗೆ ರಾಷ್ಟ್ರ ನಾಯಕರು, ಗಣ್ಯರು ಕಲಾವಿದನ ಕೈಚಳಕದಲ್ಲಿ ಮೂಡಿಬಂದಿದ್ದಾರೆ.

ಭಾವೈಕ್ಯತೆಯ ಹಾಗೂ ಒಗ್ಗಟ್ಟಿನ ಸಂದೇಶ ಸಾರುವ ಗಣೇಶ ಹಬ್ಬದ ಸಂಭ್ರಮ ರಾಷ್ಟ್ರದ್ಯಾಂತ ಮನೆ ಮಾಡಿದ್ದು, ಪ್ರತಿ ಬೀದಿ ಬೀದಿಯಲ್ಲಿ ಗಣೇಶನನ್ನು ಕೂರಿಸಿ ಸಂಭ್ರಮದಿಂದ ಪೂಜೆ ಮಾಡಿ ನಿಮಜ್ಜನ ಮಾಡುತ್ತಾರೆ. ಆದರೆ ಮೈಸೂರು ಕಲಾವಿದ ರೇವಣ್ಣ ಜೇಡಿಮಣ್ಣಿನಿಂದ ಪರಿಸರ ಸ್ನೇಹಿ ಗಣೇಶನನ್ನು ಮಾಡುವುದರಲ್ಲಿ ಪ್ರಖ್ಯಾತರಾಗಿದ್ದು, ಪ್ರತಿ ವರ್ಷ ಸಾಮಾಜಿಕ ಕಳಕಳಿಯ ಜೊತೆಗೆ ಪ್ರಸ್ತುತ ವಿದ್ಯಮಾನಗಳನ್ನು ಬಿಂಬಿಸುವ ವ್ಯಕ್ತಿಗಳನ್ನು ಗಣೇಶನೊಂದಿಗೆ ತಯಾರಿಸಿ ಪೂಜೆ ಸಲ್ಲಿಸುತ್ತಾರೆ.

ಕಲಾವಿದನ ಕೈಚಳಕದಲ್ಲಿ ಗಣೇಶನೊಂದಿಗೆ ಮೂಡಿ ಬಂದ ಗಣ್ಯರು

ಆದರೆ ಈ ವರ್ಷ ನಿಧನರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಹಾಗೂ ಅನಂತ್ ಕುಮಾರ್ ಅವರ ಕಲಾಕೃತಿಯ ಜೊತೆಗೆ ದೇಶಕ್ಕೆ ಕೀರ್ತಿ ತಂದ ಪಿ.ವಿ.ಸಿಂಧು ಹಾಗೂ ಅಭಿನಂದನ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಗಣೇಶನ ಜೊತೆ ನಿಲ್ಲಿಸಿರುವ ಕಲಾಕೃತಿಯ ಜೊತೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಬಾರಿ ದಸರಾ ಉದ್ಘಾಟಕರಾದ ಸಾಹಿತಿ ಎಸ್.ಎಲ್.ಭೈರಪ್ಪ ಗಣೇಶನೊಂದಿಗೆ ನಿಂತಿರುವ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ.

ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿವನ ಮುಂಭಾಗದ ತಾವರೆಯ ಎಲೆಯ ಮೇಲೆ ಕುಳಿತು ಧ್ಯಾನ ಮಾಡುವ ಕಲಾಕೃತಿಯನ್ನು ಚಿತ್ರಿಸಿದ್ದಾರೆ.

Last Updated : Sep 1, 2019, 11:34 AM IST

ABOUT THE AUTHOR

...view details