ಮೈಸೂರು:ನರಸಿಂಹರಾಜ ಕ್ಷೇತ್ರಕಾಂಗ್ರೆಸ್ನ ಭದ್ರಕೋಟೆ. ಈ ಬಾರಿ ಎಸ್‌ಡಿಪಿಐ, ಜನತಾದಳ ಹಾಗೂ ಬಿಜೆಪಿ ಪ್ರಬಲ ಸ್ಪರ್ಧೆ ನೀಡಲಿವೆ ಅನ್ನೋದು ರಾಜಕೀಯ ವಿಶ್ಲೇಷಕರ ಮಾತು. ಆದರೆ, ಮುಸ್ಲಿಂ ಮತದಾರರೇ ಹೆಚ್ಚಾಗಿರುವ ಈ ಕ್ಷೇತ್ರ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷದ ಅಭ್ಯರ್ಥಿ ಪಾಲಾಗುವುದು ಅಷ್ಟು ಸುಲಭದ ಮಾತಲ್ಲ. ಕ್ಷೇತ್ರದಲ್ಲಿ ಇಲ್ಲಿಯವರೆಗೆ ಯಾವ ಪಕ್ಷವೂ ಟಿಕೆಟ್ ಘೋಷಣೆ ಮಾಡಿಲ್ಲ. ಇತ್ತ ಕಡೆ ಕಾಂಗ್ರೆಸ್ನ ಈ ಭದ್ರಕೋಟೆಯನ್ನು ಕೆಡವಲು ಎಸ್‌ಡಿಪಿಐ, ಜನತಾದಳ ಹಾಗೂ ಬಿಜೆಪಿ ತುದಿಗಾಲ ಮೇಲೆ ನಿಂತಿವೆ. ಅದು ಸುಲಭವೇ? ಹಾಗಾದರೆ ಈ ಬಾರಿಯ ರಾಜಕೀಯ ಲೆಕ್ಕಾಚಾರ ಹೇಗಿದೆ ಗೊತ್ತಾ?
ಕ್ಷೇತ್ರದ ವಿಶೇಷತೆ: ರಾಜ್ಯದಲ್ಲಿಯೇ ಮುಸ್ಲಿಂ ಸಮುದಾಯದ ಕ್ಷೇತ್ರ ಎಂದು ಗುರುತಿಸಿಕೊಂಡಿರುವ ಕ್ಷೇತ್ರಗಳಲ್ಲಿ ನರಸಿಂಹರಾಜ ಮತಕ್ಷೇತ್ರವೂ ಒಂದು. ಇದುವರೆಗೂ ನಡೆದಿರುವ 16 ಚುನಾವಣೆಗಳಲ್ಲಿ 13 ಬಾರಿ ಮುಸ್ಲಿಂರೇ ಆಯ್ಕೆಯಾಗಿರುವುದು ಕ್ಷೇತ್ರದ ಮತ್ತೊಂದು ವಿಶೇಷ. ಅದರಲ್ಲಿ ಅಜೀಜ್ ಸೇಠ್ ಹಾಗೂ ಅವರ ಪುತ್ರ ತನ್ವೀರ್ ಸೇಠ್ ಅವರೇ 11 ಬಾರಿ ಆಯ್ಕೆಯಾಗುವ ಮೂಲಕ ಇದು ತಂದೆ-ಮಕ್ಕಳ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಆದರೆ, ಬದಲಾದ ರಾಜಕೀಯ ಕಾಲಘಟ್ಟದಲ್ಲಿ ಇಂತಹದೊಂದು ಕೋಟೆಯ ಮೇಲೆ ಹಿಡಿತ ಸಾಧಿಸಲು ಸಾಕಷ್ಟು ಕೈಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಲೇ ಇವೆ. ಅದು ಈ ಬಾರಿಯೂ ನಡೆಯುತ್ತಿದೆ.
ಹಿಂದುಳಿದ ಕ್ಷೇತ್ರ:1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಮೈಸೂರು ನಗರ ಉತ್ತರ ಕ್ಷೇತ್ರಕ್ಕೆ ಸೇರಿದ್ದ ಈ ಭಾಗ 1967ರಲ್ಲಿ ಪ್ರತ್ಯೇಕಗೊಂಡು ನರಸಿಂಹರಾಜ ವಿಧಾನಸಭಾಕ್ಷೇತ್ರವಾಗಿ ಉದಯವಾಯಿತು. ರಾಜ್ಯದಲ್ಲೇ ಹಿಂದುಳಿದ ಕ್ಷೇತ್ರ ಎನಿಸಿಕೊಂಡ, ರಾಜರ ಹೆಸರಿದ್ದರೂ ಸಾಗರದಷ್ಟು ಸಮಸ್ಯೆಗಳನ್ನು ಹೊತ್ತಿರುವ ದುರಂತ.
ಮತದಾರರ ಲೆಕ್ಕಾಚಾರ:ಮುಸ್ಲಿಮರ ಪ್ರಾಬಲ್ಯವುಳ್ಳ ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಮತದಾರರು ಎರಡನೇ ಸ್ಥಾನದಲ್ಲಿದ್ದಾರೆ. ಇವರೊಂದಿಗೆ ಒಕ್ಕಲಿಗರು, ನಾಯಕರು, ಲಿಂಗಾಯತರು, ಕ್ರಿಶ್ಚಿಯನ್ನರು, ಕುರುಬರು, ಮರಾಠರು, ಬ್ರಾಹ್ಮಣರು ಸಮುದಾಯದವರು ಇದ್ದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. 1,29,895 ಪುರುಷ ಮತದಾರರು, 1,32,365 ಮಹಿಳಾ ಮತದಾರರು, 40 ಇತರೆ ಸೇರಿದಂತೆ ಒಟ್ಟು 2,62,300 ಮತದಾರರು ಈ ಕ್ಷೇತ್ರದಲ್ಲಿದ್ದಾರೆ.
ತಂದೆ-ಮಕ್ಕಳ ಪ್ರಾಬಲ್ಯ:1952ರಲ್ಲಿ ಟಿ. ಮರಿಯಪ್ಪ ಆಯ್ಕೆಯಾದರು. 1957ರಲ್ಲಿ ಮಹಮ್ಮದ್ ಸೇಠ್, 1962ರಲ್ಲಿ ಬಿ.ಕೆ.ಪುಟ್ಟಯ್ಯ, 1985ರಲ್ಲಿ ಮುಕ್ತಾರುನ್ನೀಸಾ ಬೇಗಂ, 1994ರಲ್ಲಿ ಇ.ಮಾರುತಿ ಪವಾರ್ ಬಿಟ್ಟರೆ ಉಳಿದಷ್ಟು ಅವಧಿ ಅಜೀಜ್ ಸೇಠ್ ಹಾಗೂ ಅವರ ಪುತ್ರ ತನ್ವೀರ್ ಸೇಠ್ ಅವರದ್ದೇ ಪಾರುಪತ್ಯ ಆಗಿದೆ. ಹೀಗಾಗಿ ಈ ಕ್ಷೇತ್ರವನ್ನು ಅಪ್ಪ-ಮಗನ ಕೋಟೆ ಎಂದೇ ಬಣ್ಣಿಸಲಾಗುತ್ತದೆ. ಈ ಕೋಟೆಯನ್ನು ಭೇದಿಸಲು ನಿರಂತರವಾಗಿ ಪ್ರಯತ್ನ ನಡೆದಿದೆ. ಆದರೂ, ಇದುವರೆವಿಗೂ ಅದು ಯಶಸ್ಸು ಕಂಡಿಲ್ಲ.
ಸ್ಥಳೀಯ ಕೆಲ ಕೈ ಮುಖಂಡರೇ ತನ್ವೀರ್ ಅವರಿಗೆ ಒಳ ಏಟು ಕೊಡುವ ಪ್ರಯತ್ನವನ್ನು ಹಿಂದಿನಿಂದಲೂ ನಡೆಸುತ್ತಾ ಬಂದಿದ್ದಾರೆ. ಇದರ ಪರಿಣಾಮವಾಗಿಯೇ ಕಳೆದ ಬಾರಿ ಎರಡನೇ ಸ್ಥಾನಕ್ಕೆ ಎಸ್‌ಡಿಪಿಐ ಬಂದಿದ್ದು, ತನ್ವೀರ್ ಸೇಠ್ ಅವರಿಗೆ ಎಚ್ಚರಿಕೆ ಗಂಟೆ ಬಾರಿಸಿದೆ. ಗೆಲುವಿನವರೆಗೂ ಬಂದಿರುವ ಎಸ್‌ಡಿಪಿಐ, ಶತಾಯಗತಾಯ ಪ್ರಯತ್ನ ನಡೆಸಿದ್ದು ಈ ಬಾರಿ ಅಬ್ದುಲ್ ಮಜೀದ್ ಅವರನ್ನೇ ಕಣಕ್ಕಿಳಿಸುವ ನಿರ್ಧಾರ ಮಾಡಿದೆ. ಮುಸ್ಲಿಂ ಕ್ಷೇತ್ರಕ್ಕೆ ಮುಸ್ಲಿಂ ಎದುರಾಳಿಯನ್ನೇ ನಿಲ್ಲಿಸಬೇಕೆಂಬ ಜೆಡಿಎಸ್ ಪಕ್ಷದ ಪರೋಕ್ಷ ರಣತಂತ್ರ ಇಲ್ಲಿ ಸಫಲವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಬಾರಿ ರಾಜ್ಯಾದ್ಯಕ್ಷರ ಪದವಿಯನ್ನು ಸಹ ಅದೇ ಸಮುದಾಯಕ್ಕೆ ನೀಡುವ ಮೂಲಕ ಅಲ್ಪಸಂಖ್ಯಾತರ ಮತಕ್ಕೆ ಕೈ ಹಾಕುವ ಪ್ರಯೋಗ ಕೂಡ ನಡೆಸಿದೆ. ಅದರಲ್ಲೂ ರಾಜಕೀಯ ಚತುರ ಸಿಎಂ ಇಬ್ರಾಹಿಂ ಈ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಯಾವ ಸಂಚಲನದ ಪ್ರಯೋಗ ನಡೆಸಲಿದ್ದಾರೆಂಬುದು ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ.
ಇದರೊಟ್ಟಿಗೆ ಹಿಂದುತ್ವವಾದದಿಂದಲೇ ಮುಸ್ಲಿಂರ ಮನಸ್ಸು ಗೆಲ್ಲಬೇಕೆಂದು ಬಿಜೆಪಿಯೂ ಸಹ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಸಂದೇಶ್ ಸ್ವಾಮಿ ಕಳೆದೆರಡು ಚುನಾವಣೆಯಲ್ಲಿ ಸೋತಿದ್ದು, ಅವರನ್ನು ಮೀರಿ ಸಂಘಟನೆಯಲ್ಲಿರುವ ಮತ್ತೊಬ್ಬರ ಹುಡುಕಾಟ ನಡೆಸಿದೆ. ಆದರೂ ಅದು ಫಲ ನೀಡದು ಎಂಬ ಕಾರಣಕ್ಕೆ ಅಂತಿಮವಾಗಿ ಅವರನ್ನೇ ಕಣಕ್ಕಿಳಿಸಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಹಿಜಾಬ್ ಸೇರಿ ಅನೇಕ ರೀತಿಯಲ್ಲಿ ಬಿಜೆಪಿ ಸಾಧನೆ ಹಾಗೂ ಕಮಲದ ಹೆಸರಿನಲ್ಲಿಯೇ ಕ್ಷೇತ್ರದಲ್ಲಿ ಕೇಸರಿಕರಣಗೊಳಿಸುವ ಪ್ರಯತ್ನ ನಡೆಸುತ್ತಿದೆ. ಈ ನಡುವೆ ಆಮ್ ಆದ್ಮಿ ಕಾರ್ಯಪಡೆಯೂ ಕ್ಷೇತ್ರದಲ್ಲಿ ಇನ್ನಿಲ್ಲದ ಸೇವಾ ಕಾರ್ಯದ ಮುಖವಾಹಿನಿಗೆ ಇಳಿದಿದ್ದು, ಮತ್ತಷ್ಟು ಪೈಪೋಟಿ ಹೆಚ್ಚಿದೆ.
ಈವರೆಗೆ ಗೆದ್ದ ಅಭ್ಯರ್ಥಿಗಳ ವಿವರ:ಇದುವರೆಗೂ ನಡೆದಿರುವ 16 ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್ ಧಿಕಾರಕ್ಕೆ ಬಂದಿದೆ. ಉಳಿದಂತೆ ಪಕ್ಷೇತರ, ಪಿಎಸಿ, ಎಸ್ಎಸ್ಪಿ, ಜನತಾಪಕ್ಷ, ಬಿಜೆಪಿ ಕ್ರಮವಾಗಿ ಒಂದೊಂದ ಬಾರಿ ಅಧಿಕಾರ ಕಂಡಿವೆ. ತನ್ವೀರ್ ಸೇಠ್ ಸತತ 5 ಬಾರಿ ಗೆದ್ದಿದ್ದು 6ನೇ ಬಾರಿ ಅದೃಷ್ಟ ಪರೀಕ್ಷೆ ಇಳಿಯುವ ಸಾಧ್ಯತೆ ಇದೆ.
1952 : ಟಿ. ಮರಿಯಪ್ಪ (ಕಾಂಗ್ರೆಸ್)
1957 : ಮಹಮದ್ ಸೇಠ್ (ಪಕ್ಷೇತರ)
1962 : ಬಿ.ಕೆ. ಪುಟ್ಟಯ್ಯ (ಪಿಎಸಿ)
1967 : ಅಜೀಜ್ ಸೇಠ್ (ಎಸ್ಎಸ್ಪಿ)